ಶ್ರೀನಗರ: ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ವೈದ್ಯನಿಂದ ಒಂದು ಹಸುಗೂಸು ಪ್ರಾಣಬಿಟ್ಟಿರುವ ಮನಕಲಕುವ ಘಟನೆ ಜಮ್ಮು- ಕಾಶ್ಮೀರದ ಕುಪವಾರ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ರಾತ್ರಿ ಕುಪವಾರ ಜಿಲ್ಲೆಯ ಮೋರಿ ಪ್ರದೇಶದ ನಿವಾಸಿಯಾದ ಸುರಾಯ ಬೇಗಮ್ ಎನ್ನುವ ಗರ್ಭಿಣಿ ನೋವು ಕಾಣಿಸಿಕೊಂಡಿತ್ತು. ಸ್ಥಳೀಯ ಆಸ್ಪತ್ರೆಗೆ ಕರೆದುಕೊಂದು ಹೋದಾಗ, ಅಲ್ಲಿನ ವೈದ್ಯರು ಆಕೆಗೆ ಶ್ರೀನಗರದ ಲಾಲ್ ದೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದ್ದಾರೆ. ಆದರಿಂದ ಮಹಿಳೆಯನ್ನು ಆಕೆಯ ಪತಿ ಹಾಗೂ ಕುಟುಂಬಸ್ಥರು ಸುಮಾರು 130 ಕಿ.ಮಿ ದೂರದಿಂದ ಶ್ರೀನಗರದ ಆಸ್ಪತ್ರೆ ಕರೆತಂದಿದ್ದರು.
Advertisement
Advertisement
ಅಲ್ಲಿನ ವೈದ್ಯನೊಬ್ಬರು ಗರ್ಭಿಣಿಗೆ ಚಿಕಿತ್ಸೆ ನೀಡಿ ಮನೆಗೆ ತೆರೆಳುವಂತೆ ಹೇಳಿದ್ದಾರೆ. ಆದರೆ ಹಿಮ ಬೀಳುವ ಪ್ರದೇಶವಾಗಿದ್ದರಿಂದ ಹೊರಗಡೆ ಕೊರೆಯುವ ಚಳಿಯಿದೆ ಪತ್ನಿಯನ್ನು ಇಲ್ಲೇ ದಾಖಲಿಸಿಕೊಳ್ಳಿ. ನಾವು ದೂರದ ಊರಿನಿಂದ ಬಂದಿದ್ದೇವೆ ಎಂದು ಪತಿ ವೈದ್ಯರ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಇದ್ಯಾವುದಕ್ಕು ಒಪ್ಪದ ವೈದ್ಯ ಗರ್ಭಿಣಿ ಹಾಗೂ ಅವರ ಕುಟುಂಬಸ್ಥರಿಗೆ ಮನಬಂದತೆ ಬೈದು ಆಸ್ಪತ್ರೆಯಿಂದ ಹೊರ ಕಳುಹಿಸಿದ್ದಾರೆ.
Advertisement
ಬಳಿಕ ಬೇರೆ ದಾರಿಯಿಲ್ಲದೆ ಆ ಕೊರೆಯುವ ಚಳಿಯಲ್ಲಿಯೇ ಗರ್ಭಿಣಿಯನ್ನು ಮನೆಗೆ ಕರೆದುಕೊಂಡು ಹೋಗಲು ಪತಿ ನಿರ್ಧರಿಸಿದ್ದಾರೆ. ಆದರೆ ಮಧ್ಯ ದಾರಿಯಲ್ಲೇ ಮಹಿಳೆಗೆ ಹೆರಿಗೆಯಾಗಿದ್ದು, ಕೊರೆಯುವ ಚಳಿಯ ಕಾರಣ ಮಗು ಜನಿಸುವ ಮೊದಲೇ ಸಾವನ್ನಪ್ಪಿದೆ. ಈ ಪ್ರಕರಣ ಶುಕ್ರವಾರದಂದು ಬೆಳಕಿಗೆ ಬಂದಿದ್ದು, ಶನಿವಾರ ನಿರ್ಲಕ್ಷ್ಯ ತೋರಿದ ವೈದ್ಯನನ್ನು ಅಲ್ಲಿನ ಸರ್ಕಾರ ಅಮಾನತುಗೊಳಿಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv