ವಾಷಿಂಗ್ಟನ್: ಅಮೇರಿಕಾದ (United States) ದಂಪತಿಯೊಬ್ಬರಿಗೆ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಇದಾದ 48 ಗಂಟೆಗಳಲ್ಲಿಯೇ ಮಹಿಳೆ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
23 ವರ್ಷದ ಪೇಟನ್ ಸ್ಟೋವರ್ ಅವರು ಒಮಾಹಾದಲ್ಲಿ (Omaha) ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೊದಲಿಗೆ ಕೆಲಸದ ಒತ್ತಡದಿಂದ ಯಾವಾಗಲೂ ಆಯಾಸವಾಗುತ್ತದೆ ಎಂದು ಭಾವಿಸಿದ್ದರು. ಆದರೆ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಲು ಪ್ರಾರಂಭಿಸಿದಾಗ, ಅವರ ಕಾಲುಗಳಲ್ಲಿ ಊತವುಂಟಾಗುತ್ತಿದ್ದರಿಂದ ವೈದ್ಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ವೈದ್ಯರು ನೀವು ಗರ್ಭಿಣಿಯಾಗಿದ್ದೀರಾ ಎಂದು ತಿಳಿಸಿದ್ದಾರೆ.
Advertisement
Advertisement
ಇದರಿಂದ ಅನುಮಾನಗೊಂಡ ಮಹಿಳೆಯ ಪತಿ, ಮತ್ತೊಮ್ಮೆ ಟೆಸ್ಟ್ ಮಾಡಿಸಿಕೊಂಡಗಲೂ ಗರ್ಭಿಣಿಯಾಗಿರುವುದು ದೃಢವಾಗಿದೆ. ಅಲ್ಲದೇ ಸ್ಕ್ಯಾನಿಂಗ್ ವೇಳೆ ಹೊಟ್ಟೆಯಲ್ಲಿ ಮಗು ಇರುವುದನ್ನು ನೋಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ನನ್ನನ್ನು ಪ್ಯಾಕೇಜ್ ಸ್ಟಾರ್ ಅನ್ನೋರಿಗೆ ಚಪ್ಪಲೀಲಿ ಹೊಡೀತೀನಿ: ಪವನ್ ಕಲ್ಯಾಣ್ ಆನ್ ಫೈಯರ್
Advertisement
ಪೇಟನ್ ಸ್ಟೋವರ್ ತನ್ನ ಮೂತ್ರಪಿಂಡಗಳು ಮತ್ತು ಯಕೃತ್ (ಲಿವರ್) ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ಹೇಳಿದಾಗ ವೈದ್ಯರು ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದರು. ಆದರೆ ಗರ್ಭಿಣಿಯಾಗಿರುವ ಬಗ್ಗೆ ಮಾಹಿತಿ ನೀಡಿದ ಅದೇ ರಾತ್ರಿ ಮಹಿಳೆ ಮಗುವಿಗೆ ಜನ್ಮ ನೀಡಿರುವುದಾಗಿ ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಿಂದ ಶ್ರೀಲಂಕಾಗೆ ಶ್ರೀರಾಮ ನಡೆದದ್ದಕ್ಕಿಂತ ಹೆಚ್ಚು ರಾಹುಲ್ ಗಾಂಧಿ ಪಾದಯಾತ್ರೆ ಮಾಡ್ತಿದ್ದಾರೆ – ಕಾಂಗ್ರೆಸ್ ನಾಯಕ
Advertisement
ದಂಪತಿ ತಮಗೊಂದು ಮಗು ಬೇಕು ಅಂದುಕೊಂಡಿದ್ದರು. ಆದರೆ ಅವರು ಅಂದುಕೊಂಡಿದ್ದಕ್ಕಿಂತ ಬೇಗನೇ ಮಗು ಜನಿಸಿದ್ದು, ಈ ವಿಚಾರವಾಗಿ ಸಖತ್ ಥ್ರಿಲ್ ಆಗಿದ್ದಾರೆ. ನಾನು ಅವನನ್ನು ಎತ್ತಿಕೊಂಡಿದ್ದೆ. ಅವನಿಗೆ ಹಾಲುಣಿಸಿದೆ. ನಿಜಕ್ಕೂ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಪೇಟನ್ ಸ್ಟೋವರ್ ಸಂತಸ ವ್ಯಕ್ತಪಡಿಸಿದ್ದಾರೆ.