ಗದಗ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಆಸ್ಪತ್ರೆ ತೆರಳುವ ವೇಳೆ ಮಾರ್ಗಮಧ್ಯೆಯೇ ಅಂಬುಲೆನ್ಸ್‌ನಲ್ಲಿ (Ambulance) ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಬಳಗಾನೂರ ಬಳಿ ನಡೆದಿದೆ.
ತಾಲೂಕಿನ ಬಳಗಾನೂರು ಗ್ರಾಮದ ಸಲೀಮಾ ಮೆಹಬೂಬಸಾಬ್ ಮುದೆಪ್ಪನವರ್ 108 ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬೆಳಗ್ಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆ ತರುವ ವೇಳೆ ಮಾರ್ಗಮಧ್ಯದಲ್ಲಿ ಹೆರಿಗೆಯಾಗಿದೆ.
ರಕ್ಷಾಬಂಧನ ದಿನದಂದು ಈ ಹಣ್ಣು ಮಗುವಿಗೆ 108 ಸಿಬ್ಬಂದಿ ರವಿ ಬಡಿಗೇರ್ ಹಾಗೂ ಚಾಲಕ ದಸ್ತಗೀರ್ ಸಾಬ್ ಸುಲಭ ಹೆರಿಗೆ (Delivery) ಮಾಡಿಸಿದ್ದಾರೆ. ಈ ಮೂಲಕ ರಕ್ಷಾ ಬಂಧನದ ದಿನ ಮಹಿಳೆಗೆ ಅಣ್ಣಂದಿರಾಗಿ ರಕ್ಷಣೆಯಾಗಿದ್ದಾರೆ. ತಂಗಿಯಂಥಾ ಸಲೀಮಾಗೆ ನೋವಿನಿಂದ ಮುಕ್ತಿ ನೀಡಿದ್ದಾರೆ. ಇದನ್ನೂ ಓದಿ: ಹೆಚ್‌ಡಿ ಕುಮಾರಸ್ವಾಮಿ ತಡರಾತ್ರಿ ಆಸ್ಪತ್ರೆಗೆ ದಾಖಲು
ಇದೀಗ ಸಲೀಮಾ ಹಾಗೂ ಮಗುವನ್ನು ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಕಂಡಕ್ಟರ್ ದುರ್ಮರಣ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]