ರಾಯ್‍ಪುರ: ಮಾವೋವಾದಿಗಳು ಅಪಹರಿಸಿದ ಪತಿಯನ್ನು ಹುಡುಕುತ್ತಾ ಪತ್ನಿ ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಅರಣ್ಯಕ್ಕೆ ಹೋಗಿರುವ ಭಾವನಾತ್ಮಕ ಘಟನೆ ರಾಯ್‍ಪುರದಲ್ಲಿ ನಡೆದಿದೆ.
ಛತ್ತೀಸ್‍ಗಢದಲ್ಲಿ ತನ್ನ ಎಂಜಿನಿಯರ್ ಪತಿ ಅಶೋಕ್ ಅವರನ್ನು ಮಾವೋವಾದಿಗಳು ಅಪಹರಿಸಿದ ಕೆಲವು ದಿನಗಳ ನಂತರ, ಪತ್ನಿ ಸೋನಾಲಿ ಪವಾರ್, ಅವರನ್ನು ಬಿಡುಗಡೆ ಮಾಡುವಂತೆ ಭಾವನಾತ್ಮಕ ಮನವಿ ಮಾಡಿಕೊಂಡಿದ್ದರು. ಆದರೆ ಕೊನೆಗೂ ಅವರನ್ನು ಕಿಡಿಗೇಡಿಗಳು ಬಿಡುಗಡೆ ಮಾಡಿಲ್ಲ. ಪರಿಣಾಮ ತನ್ನ ಅಪ್ರಾಪ್ತ ಮಗಳೊಂದಿಗೆ ಸೋನಾಲಿ ಅವರು ಮಾವೋವಾದಿಗಳ ದಟ್ಟವಾದ ಅಬುಜ್ಮದ್ ಅರಣ್ಯಕ್ಕೆ ಪ್ರಯಾಣಿಸಿದ್ದಾರೆ.
Advertisement
Advertisement
ಮಂಗಳವಾರ ಸಂಜೆ ಎಂಜಿನಿಯರ್ ಅಶೋಕ್ ಪವಾರ್ ಮತ್ತು ಕೆಲಸಗಾರ ಆನಂದ್ ಯಾದವ್ ಅವರನ್ನು ಮಾವೋವಾದಿಗಳು ಅವರಿಗೆ ಯಾವುದೇ ರೀತಿಯ ಹಾನಿಯಾಗದಂತೆ ಬಿಡುಗಡೆ ಮಾಡಿದ್ದಾರೆ. ಆದರೆ ಸೋನಾಲಿ ಪವಾರ್ ಇನ್ನೂ ಕಾಡಿನೊಳಗಿದ್ದು, ಅವರು ಸ್ಥಳೀಯ ಪತ್ರಕರ್ತರು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿ ಕ್ಲಾಸ್‍ಗೆ ಅನುಮತಿ ನೀಡಿ ಎಂದು ವಿದ್ಯಾರ್ಥಿನಿಯರು ಪಟ್ಟು!
Advertisement
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‍ಪಿ) ಪಂಕಜ್ ಶುಕ್ಲಾ ಈ ಕುರಿತು ಪ್ರತಿಕ್ರಿಯಿಸಿದ್ದು, ಅಶೋಕ್ ಪವಾರ್ ಮತ್ತು ಯಾದವ್ ಅವರನ್ನು ಪ್ರಸ್ತುತ ಬಿಜಾಪುರದ ಕುಟ್ರುದಲ್ಲಿ ಇರಿಸಲಾಗಿದೆ. ಪತಿಯನ್ನು ಭೇಟಿಯಾಗಲು ಸೋನಾಲಿ ಶೀಘ್ರದಲ್ಲೇ ಕುಟ್ರು ತಲುಪಲಿದ್ದಾರೆ ಎಂದು ಹೇಳಿದ್ದಾರೆ.
Advertisement
ವೀಡಿಯೋದಲ್ಲಿ ಏನಿತ್ತು?
ನನ್ನ ಹೆಣ್ಣು ಮಕ್ಕಳಿಗಾಗಿ ಪತಿಯನ್ನು ಬಿಡುಗಡೆ ಮಾಡುವಂತೆ ಮಾವೋವಾದಿಗಳಿಗೆ ಭಾವನಾತ್ಮಕ ವೀಡಿಯೊವನ್ನು ಮಾಡಿ ಸೋನಾಲಿ ಅವರು ಕಳುಹಿಸಿದ್ದರು. ವೀಡಿಯೋ ಕಳುಹಿಸಿದ ನಂತರವೂ ಅಶೋಕ್ ಅವರನ್ನು ಬಿಡುಗಡೆ ಮಾಡದ ಪರಿಣಾಮ, ಸೋನಾಲಿ ಪವಾರ್ ಅವರನ್ನು ಹುಡುಕಲು ಛತ್ತೀಸ್‍ಗಢದ ಬಿಜಾಪುರ ಮತ್ತು ನಾರಾಯಣಪುರ ಜಿಲ್ಲೆಗಳ ಅಬುಜ್ಮದ್ ಅರಣ್ಯವನ್ನು ಪ್ರವೇಶಿಸಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.
ಪ್ರಸ್ತುತ ಸೋನಾಲಿ ಅವರು ಪತ್ರಕರ್ತರ ಮತ್ತು ಪೊಲೀಸರ ಸಹಾಯದಿಂದ ಕೆಲವು ಸ್ಥಳೀಯರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಸೋನಾಲಿ ಪವಾರ್ ತನ್ನ ಎರಡೂವರೆ ವರ್ಷದ ಕಿರಿಯ ಮಗಳನ್ನು ತನ್ನೊಂದಿಗೆ ಕಾಡಿಗೆ ಕರೆದೊಯ್ದಿದ್ದಾಳೆ. ಐದು ವರ್ಷದ ಹಿರಿಯ ಮಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್