ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ರೀಲ್ಸ್ ಹವಾ ಜಾಸ್ತಿಯಾಗಿದೆ. ಅದರಲ್ಲೂ ಕೆಲ ಯುವತಿಯರು ಹಾಟ್ ಉಡುಗೆಗಳನ್ನ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಡ್ಯಾನ್ಸ್ (Dance) ಮಾಡಿ ರೀಲ್ಸ್ ಕ್ರಿಯೇಟ್ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಅಂತಹ ಸ್ಥಳಗಳ ಪೈಕಿ ದೆಹಲಿ ಮೆಟ್ರೋ (Delhi Metro) ತಾಣವೂ ಒಂದಾಗಿದೆ.
View this post on Instagram
ಹೌದು. ದೆಹಲಿ ಮೆಟ್ರೋದಲ್ಲಿ ನಡೆಯುವ ಘಟನೆಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇವೆ. ಕೆಲ ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ಮಾಜಿ ಬಿಗ್‌ಬಾಸ್ ತಾರೆ ಉರ್ಫಿ ಜಾವೇದ್ ನಂತೆಯೇ ಬಿಕಿನಿ ತೊಟ್ಟು ಓಡಾಡಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ನಂತರ ಮೆಟ್ರೋ ಪ್ಲಾಫ್‌ಫಾರ್ಮ್‌ನಲ್ಲೇ ಪ್ರೇಮಿಗಳಿಬ್ಬರು ಲಿಪ್ ಲಾಕ್ ಮಾಡಿದ್ದ ದೃಶ್ಯ ವೈರಲ್ ಆಗಿತ್ತು. ಇದನ್ನೂ ಓದಿ: Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್
ಇದೀಗ ದೆಹಲಿ ಮೆಟ್ರೋ ಒಳಗೆ ಯುವತಿಯೊಬ್ಬಳು ಮೈಕಾಣುವ ಹಾಗೆ ಕಪ್ಪು ಬಣ್ಣದ ಟ್ರಾನ್ಸ್ಪರೆಂಟ್ ಬಟ್ಟೆ ಧರಿಸಿ, ಬಾಲಿವುಡ್ನ ಗುಂಡೆ ಚಿತ್ರದ ಅಸ್ಸಲಾಮೆ ಇಷ್ಕ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾಳೆ. ಮೆಟ್ರೋ ಕೋಚ್ ಒಳಗೆ ಪ್ರಯಾಣಿಕರು ಇದ್ದಾರೆ ಎಂಬ ಪರಿಜ್ಞಾನವೂ ಇಲ್ಲದೇ ಮೈಬಿಸಿ ಏರಿಸುವಂತೆ ಹಾಟ್ ಡ್ಯಾನ್ಸ್ ಮಾಡಿದ್ದಾಳೆ.
ಕಳೆದ ಮೇ 21 ರಂದು ಅಪ್‌ಲೋಡ್ ಮಾಡಿದ್ದ ವೀಡಿಯೋ ಈಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮೊದಲು ಈ ವಿಡಿಯೋ ಕಂಡಾಗ ಆಕೆ ಡ್ಯಾನ್ಸ್ ಮೇಲೆ ಕೆಲ ನೆಟ್ಟಿಗರ ಗಮನ ಸೆಳೆದಿದ್ದು, ಆಕೆಯ ಬಟ್ಟೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಆಕೆಯ ನಡವಳಿಕೆ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ. ದೆಹಲಿ ಮೆಟ್ರೋ ರೈಲು ನಿಗಮ (DMRC) ಸೋಷಿಯಲ್ ಮೀಡಿಯಾ ಖಾತೆಗೆ ಈ ವಿಡಿಯೋ ಟ್ಯಾಗ್ ಮಾಡಿ, ಯುವತಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Delhi Metro: ಮೆಟ್ರೋ ರೈಲಿನಲ್ಲಿ ಲಿಪ್ ಲಾಕ್ ಮಾಡಿದ ಪ್ರೇಮಿಗಳು – ವೀಡಿಯೋ ವೈರಲ್
ಈ ನಡುವೆ ಕೆಲವರು ಯುವತಿ ಹಿಂದೆ ನಿಂತಿದ್ದ ಅಂಕಲ್ ಒಬ್ಬರ ರಿಯಾಕ್ಷನ್ ಕಂಡು ಬಿದ್ದು ಬಿದ್ದು ನಗುತ್ತಿದ್ದಾರೆ. ಇದ್ದಕ್ಕಿದ್ದಂತೆ ಯುವತಿಯ ಡ್ಯಾನ್ಸ್ ಕಂಡು ಅಂಕಲ್ ಶಾಕ್ ಆಗಿ ನೋಡುತ್ತಿರುವುದು ಪೇಚಿಗೆ ಸಿಲುಕಿದೆ.
ಈ ಹಿಂದೆ ಯುವತಿಯೊಬ್ಬಳು ದೆಹಲಿ ಮೆಟ್ರೋದಲ್ಲಿ ಬಿಕಿನಿ ತೊಟ್ಟು ಸಂಚರಿಸಿದ್ದಾಗ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಎಚ್ಚರಿಕೆ ನೀಡಿತ್ತು. ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಸಾಮಾಜಿಕ ಶಿಷ್ಟಾಚಾರವನ್ನು ಮೆಟ್ರೋದಲ್ಲಿ ಅನುಸರಿಸಬೇಕಾಗುತ್ತದೆ. ಪ್ರಯಾಣಿಕರು ಇತರರ ಸಂವೇದನೆಗೆ ಧಕ್ಕೆ ತರುವಂತಹ ಉಡುಪುಗಳ್ನು ಧರಿಸಬಾರದು. ಒಂದು ವೇಳೆ ಇನ್ಮುಂದೆ ಅಂತಹ ಸನ್ನಿವೇಶಗಳು ಕಂಡುಬಂದಲ್ಲಿ ಡಿಎಂಆರ್‌ಸಿ ನಿರ್ವಹಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 59ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಸಿತ್ತು.