ರಾಯಚೂರು: 2024ರಲ್ಲಿ ರಾಯಚೂರಿನ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ ಲಿಂಗಸುಗೂರು (Lingasuguru) ಪೀಠ ತೀರ್ಪು ನೀಡಿದೆ.
ಮೃತ ಮಹಿಳೆ ವಿಜಯಲಕ್ಷ್ಮಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯರಡೋಣ ಗ್ರಾಮದ ಆರೋಪಿ ದೇವರಾಜ ವಿರುದ್ಧ ಆರೋಪಿ ಸಾಬೀತಾದ ಹಿನ್ನೆಲೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಲಿಂಗಸುಗೂರು ಪೀಠ ತೀರ್ಪು ನೀಡಿ, ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.ಇದನ್ನೂ ಓದಿ:ಕಾಂಗ್ರೆಸ್ ಅಧಿಕಾರದಲ್ಲಿದ್ರೆ ಮನೆ-ಮನೆಗಳಲ್ಲಿ ಚುನಾವಣೆ ಮಾಡಿ ಗಂಡ-ಹೆಂಡ್ತಿಗೆ ಜಗಳ ತಂದಿಡ್ತಾರೆ: ಛಲವಾದಿ ಕಿಡಿ
ಮೃತ ಮಹಿಳೆ ಪತಿ ಮರಣ ನಂತರ ತವರು ಮನೆ ಯರಡೋಣದಲ್ಲಿ ವಾಸವಾಗಿದ್ದರು. ಈ ವೇಳೆ ಸಲುಗೆ ಬೆಳೆಸಿಕೊಂಡು ದೇವರಾಜ ಅಕ್ರಮ ಸಂಬಂಧ ಹೊಂದಿದ್ದ. 2024ರ ಮಾ.10ರಂದು ಅಮವಾಸ್ಯೆ ಹಿನ್ನೆಲೆ ಇಬ್ಬರು ಜೊತೆಯಲ್ಲಿ ಛತ್ತರ ಹನುಮಪ್ಪ ದೇವಸ್ಥಾನಕ್ಕೆ ಹೋಗಿದ್ದರು. ಗ್ರಾಮಕ್ಕೆ ಮರಳುವಾಗ ಲಿಂಗಸುಗೂರಿನಲ್ಲಿ ಹಳ್ಳದ ದಂಡೆಯ ಪೊದೆಯಲ್ಲಿ ತನ್ನ ಜೊತೆ ಮಲಗಲು ಸಹಕರಿಸದಿದ್ದಕ್ಕೆ ಆರೋಪಿ ಮಹಿಳೆಯನ್ನ ಕೊಲೆ ಮಾಡಿದ್ದ. ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

