ಶ್ರೀನಗರ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ಹಿಂಪಡೆದಿರುವ ಕೇಂದ್ರ ಸರ್ಕಾರ ನಿರ್ಧಾರ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಭೀಗಿ ಭದ್ರತೆಯನ್ನು ಹೊಂದಿದ್ದ ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ನಡುವೆ ಭದ್ರತೆಯಲ್ಲಿ ತೊಡಗಿದ್ದ ಮಹಿಳಾ ಸಿಆರ್‌ಪಿಎಫ್ ಸಿಬ್ಬಂದಿಗೆ ಕಾಶ್ಮೀರದ ಬಾಲಕ ಹ್ಯಾಂಡ್ ಶೇಕ್ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಪ್ರಸಾರ ಭಾರತಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಟ್ವೀಟ್ ಮಾಡಲಿದ್ದು, ಫೋಟೋ ನೋಡಿದ ಹಲವು ಮಂದಿ ಯೋಧರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸಿಆರ್‌ಪಿಎಫ್ ಯೋಧರು ಉತ್ತಮ ಕಾರ್ಯವನ್ನು ಮಾಡುತ್ತಿದ್ದು, ನಿಮ್ಮ ಕಾರ್ಯಕ್ಕೆ ಧನ್ಯವಾದ ಎಂದು ಹಲವರು ಮರು ಟ್ವೀಟ್ ಮಾಡುತ್ತಿದ್ದಾರೆ.
Advertisement
Child shaking hands with @crpfindia personnel in Kashmir. pic.twitter.com/dWnFQmfHeu
— Prasar Bharati News Services (@PBNS_India) August 8, 2019
Advertisement
ಇತ್ತ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಸಹಿ ಹಾಕಿದ್ದಾರೆ. ಅಕ್ಟೋಬರ್ 31 ರಿಂದ ಜಾರಿ ಆಗುವಂತೆ ಜಮ್ಮು ಕಾಶ್ಮೀರ, ಲಡಾಖ್ 2 ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬರಲಿದೆ. ಲಡಾಖ್ ಚಂಡೀಗಢದಂತೆ ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವಾದರೆ, ಜಮ್ಮು ಕಾಶ್ಮೀರ ಶಾಸನೆ ಸಭೆಯನ್ನು ಹೊಂದಿರಲಿದೆ.