ಬೆಂಗಳೂರು: ಪೊಲೀಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ರೈಲಿನಲ್ಲಿ ಪ್ರಯಾಣಿಸಿದ್ದ ಮಹಿಳಾ ಪೇದೆಗಳು ಸೀಟ್ ಸಿಕ್ಕದೇ ಶೌಚಾಲಯದ ಬಳಿ ಮಲಗಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಹೌದು. ಕೆಲ ತಿಂಗಳ ಹಿಂದೆ ಕಲಬುರಗಿಯಲ್ಲಿ ಪೊಲೀಸ್ ಕ್ರೀಡಾಕೂಟ ಆಯೋಜನೆಗೊಂಡಿತ್ತು. ಈ ಕ್ರೀಡಾಕೂಟಕ್ಕೆ ಬೆಂಗಳೂರಿನಿಂದ ಮಹಿಳಾ ಪೇದೆಗಳು ರೈಲಿನಲ್ಲಿ ತೆರಳಿದ್ದರು. ರೈಲಿನಲ್ಲಿ ಸೀಟ್ ಸಿಗದೇ ಇದ್ದ ಕಾರಣ ಪೇದೆಗಳು ಬೋಗಿ ಮತ್ತು ಶೌಚಾಲಯದ ಬಳಿ ಮಲಗಿ ಪ್ರಯಾಣಿಸಿದ್ದರು.
Advertisement
ಪೇದೆಗಳ ಈ ಸ್ಥಿತಿಯನ್ನು ನೋಡಿದ ಸಹ ಪ್ರಯಾಣಿಕರೊಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಈಗ ವೈರಲ್ ಆಗಿದೆ. ಯಾವುದೇ ವ್ಯವಸ್ಥೆ ಕಲ್ಪಿಸದ ಸರ್ಕಾರ ಬಗ್ಗೆ ಜನರು ವ್ಯಾಪಕ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
Advertisement
Advertisement
ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರರ ಸಂಘದ ಮುಖಂಡ ರಮೇಶ್ ಸಂಗ ಪ್ರತಿಕ್ರಿಯಿಸಿ, ನಾನು ಮಹಿಳಾ ಪೇದೆಗಳ ಜೊತೆ ಮಾತನಾಡಿದ್ದೆ. ಯಾಕೆ ಇಲ್ಲಿ ಮಲಗಿದ್ದೀರಿ ಎಂದು ಕೇಳಿದ್ದಕ್ಕೆ ಆರಂಭದಲ್ಲಿ ನಮಗೆ ಟಿಕೆಟ್ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದರು. ಆದರೆ ಸ್ಟೇಷನ್ ಗೆ ಬಂದಾಗ ಟಿಕೆಟ್ ಮಾಡದೇ ಇರುವ ವಿಚಾರ ತಿಳಿಯಿತು. ಹೀಗಾಗಿ ನಾವು ಇಲ್ಲಿ ಮಲಗಿದ್ದೇವೆ ಎಂದು ತಿಳಿಸಿದರು ಎಂದು ಅವರು ಹೇಳಿದರು.
Advertisement