ಲಕ್ನೋ: ಪೊಲೀಸ್ ಇನ್ಸ್ ಪೆಕ್ಟರ್ ಮಹಿಳಾ ಪೇದೆಗೆ ಗನ್ ತೋರಿಸಿ ಅತ್ಯಾಚಾರಗೈದು ವಿಡಿಯೋ ಮಾಡಿ ಸತತವಾಗಿ 8 ವರ್ಷಗಳ ಕಾಲ ನಿರಂತರವಾಗಿ ದೌರ್ಜನ್ಯ ಎಸೆಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ.
ಲೋಕೇಂದ್ರಪಾಲ್ ಸಿಂಗ್ ಅತ್ಯಾಚಾರಗೈದ ಕಾಮುಕ ಪೊಲೀಸ್ ಇನ್ಸ್ ಪೆಕ್ಟರ್. ಈ ಸಂಬಂಧ ಮಹಿಳಾ ಪೇದೆ ಎಸ್ಎಸ್ಪಿ ಮಂಜಿಲ್ ಸೈನಿ ಅವರಿಗೆ ದೂರು ನೀಡಿದ್ದಾರೆ.
Advertisement
2009ರಲ್ಲಿ ಬುಲಂದ್ಶಹರ್ ನಲ್ಲಿ ನನ್ನ ಕುಟುಂಬದ ಆಸ್ತಿ ವಿವಾದವೊಂದರಲ್ಲಿ ಇನ್ಸ್ ಪೆಕ್ಟರ್ ಲೋಕೇಂದ್ರಪಾಲ್ ಸಿಂಗ್ ಮಧ್ಯಸ್ಥಿಕೆ ವಹಿಸಿ ವ್ಯಾಜ್ಯವನ್ನು ಬಗೆಹರಿಸಿದ್ದನು. ಈ ಒಂದು ಕಾರಣದಿಂದ ಲೋಕೇಂದ್ರ ನಮ್ಮ ಪೋಷಕರ ವಿಶ್ವಾಸವನ್ನು ಪಡೆದುಕೊಂಡಿದ್ದನು. 2010ರಲ್ಲಿ ಲೋಕೇಂದ್ರಪಾಲ್ ದೀಪಾವಳಿ ಹಬ್ಬದಂದು ಕೆಲಸದ ನಿಮಿತ್ತ ಹೊರಗಡೆ ಹೋಗಬೇಕೆಂದು ಹೇಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗನ್ ತೋರಿಸಿ ಅತ್ಯಚಾರ ಎಸಗಿ, ವಿಡಿಯೋ ಮಾಡಿಕೊಂಡು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ ಎಂದು ಸಂತ್ರಸ್ತೆ 34 ವರ್ಷದ ಮಹಿಳಾ ಪೇದೆ ಹೇಳಿದ್ದಾರೆ.
Advertisement
Advertisement
Advertisement
ಲೋಕೇಂದ್ರ ಹಲವು ಬಾರಿ ಆ ವಿಡಿಯೋ ಮತ್ತು ಆಡಿಯೋವನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ನಂತರ ನಾನು ಆಗ ಎಸ್ಎಸ್ಪಿ ಸೈನಿ ಹತ್ತಿರ ದೂರು ದಾಖಲಿಸಿದೆ. ಮತ್ತೆ ಲೋಕೇಂದ್ರ ಫೋನ್ ಮಾಡಿ ಕೋರ್ಟ್ ಆವರಣದಲ್ಲೇ ನನ್ನ ಮೇಲೆ ದೌರ್ಜನ್ಯ ಎಸೆಯುವುದಾಗಿ ಬೆದರಿಕೆ ಹಾಕಿದ್ದನು ಎಂದು ಮಹಿಳೆ ತಿಳಿಸಿದ್ದಾರೆ.
ಲೋಕೇಂದ್ರ ತನ್ನ ತಾಯಿಯ ಆರೋಗ್ಯ ಸರಿಯಿಲ್ಲ ಎಂದು 3 ದಿನಗಳ ಹಿಂದೆಯೇ ಮೋರದಾಬಾದ್ಗೆ ತೆರೆಳಿದ್ದನು. ಅಲ್ಲಿಂದ ಬಂದ ಮೇಲೆ ಕೇಸ್ ವಾಪಾಸ್ ತೆಗೆದುಕೊಳ್ಳಲು ಮಹಿಳೆಯನ್ನು ಬೆದರಿಸಿದ್ದಾನೆ.
ಆರೋಪಿ ಲೋಕೇಂದ್ರನಿಗೆ ಇಡೀ ಡಿಪಾರ್ಟ್ ಮೆಂಟ್ ಸಹಾಯ ಮಾಡುತ್ತಿದೆ. ಅವನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದ್ದು, ಮಹಿಳೆ ಕೋರ್ಟ್ನಲ್ಲಿ ತನ್ನ ಹೇಳಿಕೆಯನ್ನು ಕೂಡ ನೀಡಿದ್ದಾರೆ. ಸದ್ಯ ಆರೋಪಿ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದು ಅದರಲ್ಲಿ ಅತ್ಯಾಚಾರ ಕೇಸ್ ಕೂಡ ದಾಖಲಾಗಿದೆ. ಮಹಿಳೆ ಹೇಳಿಕೆ ಕೇಳಿದ ಮೇಲೂ ಲೋಕೇಂದ್ರನನ್ನು ಅಮಾನತು ಮಾಡಲಿಲ್ಲ ಹಾಗೂ ಬಂಧಿಸಿಯೂ ಇಲ್ಲ ಎಂದು ಮಹಿಳೆಯ ವಕೀಲರಾದ ಸಚಿನ್ ಕುಮರ್ ನರೇಶ್ ತಿಳಿಸಿದ್ದಾರೆ.
ಮಹಿಳೆಗೆ ಹಾಗೂ ಆಕೆಯ ಕುಟುಂಬಕ್ಕೆ ಆರೋಪಿ ಜೀವಬೆದರಿಕೆ ಹಾಕಿದ್ದಾನೆ. ಸದ್ಯ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಮನ್ ಸಿಂಗ್ ಚೌಹಾನ್ ತಿಳಿಸಿದ್ದಾರೆ. ಲೋಕೇಂದ್ರಪಾಲ್ ಅತ್ಯಾಚಾರವನ್ನು ವಿಡಿಯೋ ಮಾಡಿಕೊಂಡು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ. ಆದ್ರೆ ಸಂತ್ರೆಸ್ತೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತಾಗಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ಹಿಂದೆ ಜನವರಿಯಲ್ಲಿ ಆಂಧ್ರ ಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯಲ್ಲಿ ಸಂತಮಗಳೂರು ಗ್ರಾಮದಲ್ಲಿ ರಾತ್ರಿ ಪಾಳೆಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಸೆಕ್ಯೂರಿಟಿ ಗಾರ್ಡ್ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಕೊಲೆ ಬಳಿಕ ಮಹಿಳಾ ಸೆಕ್ಯೂರಿಟಿ ಗಾರ್ಡ್ ಶವವನ್ನು ಸ್ಥಳೀಯ ಕೆರೆಯೊಂದರಲ್ಲಿ ಎಸೆದು ಹೋಗಿದ್ದರು.