Connect with us

Latest

ಮಗುವನ್ನ ಎತ್ತಿಕೊಂಡೇ ಕರ್ತವ್ಯಕ್ಕೆ ಕಾನ್ಸ್‌ಟೇಬಲ್ ಹಾಜರ್

Published

on

– ಕರ್ತವ್ಯವೂ ಮುಖ್ಯ ಎಂದ ಪೇದೆ
– ಪತಿ ಸ್ಮರ್ಧಾತ್ಮಕ ಪರೀಕ್ಷೆಯಲ್ಲಿ ಭಾಗಿ

ಲಕ್ನೋ: ಮಹಿಳಾ ಕಾನ್ಸ್‌ಟೇಬಲ್ ತನ್ನ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡೇ ಕರ್ತವ್ಯಕ್ಕೆ ಹಾಜರಾಗಿರುವ ಮಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ಪ್ರೀತಿ ರಾಣಿ ಒಂದುವರೆ ವರ್ಷದ ಮಗುವನ್ನು ಎತ್ತಿಕೊಂಡು ಕರ್ತವ್ಯ ಪಾಲನೆ ಮಾಡಿರುವ ಕಾನ್ಸ್‌ಟೇಬಲ್. ಇವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಸಿಬ್ಬಂದಿ ಭದ್ರತೆಯ ಭಾಗವಾಗಿ ಕರ್ತವ್ಯದಲ್ಲಿದ್ದರು.

ಇವನ ತಂದೆ ಸ್ಮರ್ಧಾತ್ಮಕ ಪರೀಕ್ಷೆಯೊಂದರಲ್ಲಿ ಭಾಗಿಯಾಗಿದ್ದರು. ಆದ್ದರಿಂದ ಅವರು ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ನಾನೇ ಮಗನನ್ನು ನೋಡಿಕೊಳ್ಳಬೇಕಾಯಿತು. ಕರ್ತವ್ಯವೂ ಮುಖ್ಯವಾಗಿದೆ. ಆದ್ದರಿಂದ ನಾನು ಮಗುವನ್ನು ಇಲ್ಲಿಗೆ ಕರೆದುಕೊಂಡು ಬರಬೇಕಾಯಿತು ಎಂದು ಕಾನ್ಸ್‌ಟೇಬಲ್ ಪ್ರೀತಿ ರಾಣಿ ಹೇಳಿದ್ದಾರೆ.

ಯೋಗಿ ಆದಿತ್ಯನಾಥ್ ಎರಡು ದಿನಗಳ ಕಾಲ ಗ್ರೇಟರ್ ನೋಯ್ಡಾದ ಗೌತಮ್ ಬುದ್ಧ ನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆದಿತ್ಯನಾಥ್  ಅವರು 1,452 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಸಂಸದರಾದ ಮಹೇಶ್ ಶರ್ಮಾ, ತರುಣ್ ವಿಜಯ್, ಶಾಸಕರಾದ ಪಂಕಜ್ ಸಿಂಗ್ ಮತ್ತು ಧೀರೇಂದ್ರ ಸಿಂಗ್ ಸೇರಿದಂತೆ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೀಗ ಕಾನ್ಸ್‌ಟೇಬಲ್ ಪ್ರೀತಿ ರಾಣಿ ಅವರು ತಮ್ಮ ಮಗುವನ್ನು ಎತ್ತಿಕೊಂಡು ಕರ್ತವ್ಯಕ್ಕೆ ಹಾಜರಾಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಮಹಿಲಾ ಕಾನ್‍ಸ್ಟೇಬಲ್ ಕರ್ತವ್ಯ ಪಾಲನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in