ಬೀಜಿಂಗ್: ಗಂಡನಿಂದ ಡಿವೋರ್ಸ್ ಪಡೆಯಲು ಸೆಕ್ಸ್ ವರ್ಕರ್ ಬಳಿ, ಪತಿಯನ್ನೇ ಟ್ರ್ಯಾಪ್ ಮಾಡಲು ಹೋಗಿ ಮಹಿಳೆ ಸಿಕ್ಕಿಬಿದ್ದಿರುವ ಘಟನೆ ಚೀನಾದಲ್ಲಿ ನಡೆದಿದೆ.
ಪತಿಯನ್ನು ಟ್ರ್ಯಾಪ್ ಮಾಡಲು ಮುಂದಾಗಿದ್ದ ಚೀನಾದ (China) ಮಹಿಳೆ ಮತ್ತು ಆಕೆಯ ಸಹಚರರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಪತಿ ವೇಶ್ಯೆ ಜೊತೆ ಸಂಬಂಧ ಹೊಂದಿದ್ದಾನೆಂದು ಬಿಂಬಿಸಲು ಮಹಿಳೆ ಯೋಜನೆ ರೂಪಿಸಿದ್ದಳು. ಇದನ್ನೂ ಓದಿ: ಸಿರಿಯಾದಲ್ಲಿ ಬಿಕ್ಕಟ್ಟು – ಅಲ್ಲೋಲ ಕಲ್ಲೋಲ ಎಬ್ಬಿಸಿದೆ ಆಕೆಯ ಒಂದು ವೀಡಿಯೋ; ದೊಡ್ಡಣ್ಣನ ಕುತಂತ್ರದಿಂದ ಹೀಗಾಯ್ತಾ?
ಪತ್ನಿಯ ಟ್ರ್ಯಾಕಿಂಗ್ ಬಲೆಗೆ ಬೀಳುವ ಮುನ್ನ ಪತಿ ಎಚ್ಚೆತ್ತುಕೊಂಡು, ತಕ್ಷಣ ಪೊಲೀಸರಿಗೆ ವರದಿ ಮಾಡಿದ್ದಾನೆ. ಇದರಿಂದ ಪತ್ನಿಯ ಯೋಜನೆಗೆ ಹಿನ್ನಡೆಯಾಗಿದೆ. ಈ ಪ್ರಕರಣವನ್ನು ನಂತರ ನೈಋತ್ಯ ಚೀನಾದ ಗುಯಿಝೌ ಪ್ರಾಂತ್ಯದಲ್ಲಿರುವ ಲಾಂಗ್ಲಿ ಕೌಂಟಿಯ ನ್ಯಾಯಾಲಯದ ಮುಂದೆ ತರಲಾಯಿತು.
ಕೊನೆಗೆ ನ್ಯಾಯಾಲಯ ಆರೋಪಿತ ಮಹಿಳಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇದನ್ನೂ ಓದಿ: ವೈಟ್ ಹೌಸ್ AI ವಿಭಾಗದ ನೀತಿ ಸಲಹೆಗಾರನಾಗಿ ಭಾರತ ಮೂಲದ ಶ್ರೀರಾಮ್ ಕೃಷ್ಣನ್ ನೇಮಕ