ಬೆಂಗಳೂರು: ತಂದೆಯ ಸಾವಿಗೆ ಭಾವಿ ಪತ್ನಿಯನ್ನು ದೂಷಿಸಿ ವರ ಮದುವೆ ಮುರಿದಿದ್ದಕ್ಕೆ ಮನನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
32 ವರ್ಷದ ನಾಗಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರಿಗೆ ಕಾರ್ತಿಕ್ ಎಂಬ ಯುವಕನ ಜೊತೆ ಕಳೆದ ವರ್ಷ ನಿಶ್ಚಿತಾರ್ಥವಾಗಿತ್ತು. ಆದ್ರೆ ಆ ಬಳಿಕ ಯುವಕನ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮದುವೆ ಮುಂದೂಡಲಾಗಿತ್ತು. ನಂತರ ಮೇ 22ರಂದು ಮದುವೆ ನಿಶ್ಚಯವಾಗಿ ಆಹ್ವಾನ ಪತ್ರಿಕೆ ಹಂಚಲಾಗಿತ್ತು. ಆದ್ರೆ ಹುಡುಗಿ ದುರಾದೃಷ್ಟವೆಂದು ಹೇಳಿ ಕಾರ್ತಿಕ್ ಈ ಮದುವೆಯನ್ನು ಮುರಿದಿದ್ದು, ಇದರಿಂದ ಮನನೊಂದ ಯುವತಿ ನೇಣಿಗೆ ಶರಣಾಗಿದ್ದಾರೆ.
- Advertisement -
- Advertisement -
ಆತ್ಮಹತ್ಯೆಗೂ ಮುನ್ನ ನಾಗಲಕ್ಷ್ಮೀ 5 ಪುಟಗಳ ಡೆತ್ ನೋಟ್ ಟೈಪ್ ಮಾಡಿ ತಂದೆಗೆ ಮೇಲ್ ಮಾಡಿದ್ದು, ಸದ್ಯ ಪೊಲೀಸರು ನಾಗಲಕ್ಷ್ಮಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -
ಘಟನೆ ಸಂಬಂಧ ಯುವಕ ಕಾರ್ತಿಕ್ ನ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -