ಪತಿಯಿಂದ ನಿಂದನೆ – ಡೀಸೆಲ್ ಸುರಿದು ಗೃಹಿಣಿ ಆತ್ಮಹತ್ಯೆ

Public TV
1 Min Read
MYS SUICIDE copy

ಮೈಸೂರು: ಗೃಹಿಣಿಯೊಬ್ಬಳು ಪತಿಯ ನಿಂದನೆ ಮಾತುಗಳಿಗೆ ಬೇಸತ್ತು ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ದೊಡ್ಡನಹುಂಡಿ ಗ್ರಾಮದಲ್ಲಿ ನಡೆದಿದೆ.

27 ವರ್ಷದ ಮಹದೇವಮ್ಮ ಆತ್ಮಹತ್ಯೆಗೆ ಶರಣಾದ ಗೃಹಿಣಿ. 10 ವರ್ಷದ ಹಿಂದೆ ದೊಡ್ಡನಹುಂಡಿ ಗ್ರಾಮದ ರಮೇಶ್ ಜೊತೆ ಮೃತ ಮಹದೇವಮ್ಮರ ಮದುವೆಯಾಗಿತ್ತು. ವಿವಾಹದ ನಂತರ ಮಹದೇವಮ್ಮ ಶೀಲದ ಬಗ್ಗೆ ಪತಿ ಶಂಕೆ ವ್ಯಕ್ತಪಡಿಸುತ್ತಿದ್ದನು. ಇದೇ ವಿಚಾರವಾಗಿದೆ ಪ್ರತಿದಿನ ಪತಿ ರಮೇಶ್ ಪತ್ನಿ ಮಹದೇವಮ್ಮರಿಗೆ ನಿಂದನೆ ಮಾಡುತ್ತಿದ್ದನು.

vlcsnap 2019 03 10 12h33m58s248

ಪತಿಯ ನಿಂದನೆ ಮಾತುಗಳಿಗೆ ಬೇಸತ್ತು ಮಹದೇವಮ್ಮ ಶನಿವಾರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ತಲಕಾಡು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *