ಬೆಂಗಳೂರು: ಅಡುಗೆ ಮಾಡಿಲ್ಲ ಎನ್ನುವ ಕ್ಷುಲ್ಲಕ ವಿಚಾರಕ್ಕೆ ಪತಿಯೊಂದಿಗೆ ಜಗಳವಾಡಿಕೊಂಡು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕದಿರೇನಹಳ್ಳಿಯಲ್ಲಿ ನಡೆದಿದೆ.
ಸಂಜನಿ(24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಮಕ್ಕಳು ಶಾಲೆಗೆ ತೆರಳಿದಾಗ ಮನೆಯಲ್ಲಿ ಯಾರು ಇಲ್ಲದ ವೇಳೆ ಸಂಜನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಸಂಜನಿ ಇಂದು ಶಾಲೆಗೆ ಮಕ್ಕಳನ್ನು ಕಳಿಸುವಾಗ ಅಡುಗೆ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಪತಿ, ಮಕ್ಕಳು ಶಾಲೆಗೆ ಹಸಿವಿನಲ್ಲಿ ಹೋಗಬೇಕಾ ಎಂದು ಪ್ರಶ್ನಿಸಿ ಗದರಿದ್ದಾರೆ. ಈ ವೇಳೆ ಸಂಜನಿ ಕೂಡ ನಾನೇನು ಮನೆ ಕೆಲಸದವಳು ಅಲ್ಲ ಅಂತ ಜಗಳ ಮಾಡಿದ್ದಾರೆ. ಹೀಗೆ ಇಬ್ಬರ ಮಧ್ಯೆ ಮಾತಿನ ಚಕಮಕಿ ಮುಂದುವರಿದಿದ್ದು, ಪತಿ ಬೈದಿದ್ದಕ್ಕೆ ಪತ್ನಿ ಮನನೊಂದಿದ್ದರು ಎನ್ನಲಾಗುತ್ತಿದೆ.
ಇತ್ತ ಮಕ್ಕಳು ಶಾಲೆಗೆ ತೆರಳಿದ ಬಳಿಕ ಬೇಸತ್ತ ಸಂಜನಿ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv