ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅನ್ನು ಮದುವೆಯಾಗಲು ಮಾನಸಿಕ ಅಸ್ವಸ್ಥೆಯಾದ 24 ವರ್ಷದ ಯುವತಿಯೊಬ್ಬಳು ಮನೆ ಬಿಟ್ಟು ಮುಂಬೈಗೆ ಬಂದಿದ್ದಾಳೆ.
ಯುವತಿ ಆಗಸ್ಟ್ 11 ರಂದು ಮನೆಯನ್ನು ಬಿಟ್ಟು ಬಂದಿದ್ದಾಳೆ. ಮುಂಬೈ ತಲುಪಿದ ಬಳಿಕ ಸಲ್ಮಾನ್ ಖಾನ್ ಉಳಿದುಕೊಂಡಿದ್ದ ಬಾಂದ್ರದ ಗ್ಯಾಲಕ್ಸಿ ಅಪಾಂರ್ಟ್‍ಮೆಂಟ್ ಬಳಿ ಬಂದಿದ್ದಾಳೆ. ಆದರೆ ಅಪಾಂರ್ಟ್‍ಮೆಂಟಿನ ಸೆಕ್ಯೂರಿಟಿ ಯುವತಿಯನ್ನು ಒಳಗೆ ಬಿಟ್ಟಿಲ್ಲ. ತನ್ನನ್ನು ಒಳಗೆ ಬಿಡುವಂತೆ ಗಲಾಟೆ ಮಾಡಿದ್ದು, ಸೆಕ್ಯೂರಿಟಿ ಯುವತಿಯನ್ನು ಅಲ್ಲಿಂದ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಯುವತಿ ಸೆಕ್ಯೂರಿಟಿ ಒಳಗೆ ಬಿಡದ ಕಾರಣ ಅಲ್ಲೇ ಅಕ್ಕ ಪಕ್ಕ ಓಡಾಡಿಕೊಂಡಿದ್ದಳು. ಇದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಬಳಿಕ ಪೊಲೀಸರು ಆಕೆಯನ್ನು ಕರೆದುಕೊಂಡು ವೈದ್ಯಕೀಯ ಚಿಕಿತ್ಸೆಗೆ ಒಳಒಪಡಿಸಿದಾಗ, ಆಕೆ ಮಾನಸಿಕ ಅಸ್ವಸ್ಥೆ ಎಂದು ತಿಳಿದು ಬಂದಿದೆ.
ಆರಂಭದಲ್ಲಿ ಯುವತಿ ನಾನು ಸಲ್ಮಾನ್ ಖಾನ್ ಅವರನ್ನು ಮದುವೆ ಆಗಲು ಮುಂಬೈಗೆ ಬಂದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಆಗಸ್ಟ್ 29 ರಂದು ಕೆಲವು ಫೋನ್ ನಂಬರ್‌ಗಳನ್ನು ಯುವತಿ ಪೊಲೀಸರಿಗೆ ನೀಡಿದ್ದಾಳೆ. ಅದರಲ್ಲಿ ಯುವತಿಯ ತಂದೆ ನಂಬರ್ ಇದ್ದು ಅವರಿಗೆ ವಿಷಯವನ್ನು ತಿಳಿಸಿದಾಗ ಅವರ ಪೋಷಕರು ಮುಂಬೈಗೆ ಬಂದು ಯುವತಿಯನ್ನು ಕರೆದುಕೊಂಡು ಹೋದರು ಎಂದು ಪೊಲೀಸ್ ಅಧಿಕಾರಿ ತರ್ಕುಂಡೆ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv