– ಸಂಘದ ಮುಖ್ಯಸ್ಥೆಯೇ ಕುಟುಂಬದೊಂದಿಗೆ ಎಸ್ಕೇಪ್
ವಿಜಯಪುರ: ಆ ಮಹಿಳೆಯರೆಲ್ಲ ಅಲ್ಲಿ ಇಲ್ಲಿ ಸಾಲ ತಂದು ಸ್ವ-ಉದ್ಯೋಗ ಮಾಡಿಕೊಂಡಿದ್ದರು. ಇದರ ಮಧ್ಯೆ ಮಕ್ಕಳ ವಿದ್ಯಾಭ್ಯಾಸ, ಮಗಳ ಮದುವೆ ಸೇರಿದಂತೆ ಹಲವು ಸಮಸ್ಯೆ ನೀಗಿಸಲು ಸ್ವಸಹಾಯ ಸಂಘ ನೆರವಾಗಿತ್ತು. ಆದರೆ ಇದೀಗ ಅದೇ ಸ್ವ-ಸಹಾಯ ಸಂಘಕ್ಕೆ ಸಂಕಷ್ಟ ಬಂದೊದಗಿದೆ.
Advertisement
ವಿಜಯಪುರ ಜಿಲ್ಲೆಯ ಚಡಚಣದ ಉಮರಜ ಗ್ರಾಮದ ಮಹಿಳೆಯರು ಬಳಹ ಹಿಂದಿನಿಂದಲೂ ಗ್ರಾಮದಲ್ಲೇ ಸ್ವಸಹಾಯ ಸಂಘ ಕಟ್ಟಿಕೊಂಡಿದ್ದರು. ಆದರೆ ಇದೀಗ ನಂಬಿದ ಸಂಘದ ಮುಖ್ಯಸ್ಥರ ಕುಟುಂಬವೇ ಲಕ್ಷಾಂತರ ಹಣ ತೆಗೆದುಕೊಂಡು ಜನರಿಗೆ ಮೋಸ ಮಾಡಿ ಪರಾರಿಯಾಗಿದ್ದಾರೆ. ಈ ಗ್ರಾಮದ ಜನರು 10 ವರ್ಷದಿಂದ ಅಲ್ಲಿ ಇಲ್ಲಿ ಅಲ್ಪ ಸಾಲ ಪಡೆದು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಸಂಘದ ಮುಖ್ಯಸ್ಥೆ ರಶೀದಾ ಶೇಖ್ ಸದಸ್ಯರಿಗೆ ಗೊತ್ತಿಲ್ಲದಂತೆ ಹಲವು ಬ್ಯಾಂಕ್‍ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕುಟುಂಬ ಸಹಿತ ಕಾಲ್ಕಿತ್ತಿದ್ದಾರೆ ಎಂದು ವಂಚನೆಗೊಳಗಾದ ಜುಬೇದಾ ಮುಲ್ಲಾ ತಿಳಿಸಿದ್ದಾರೆ.
Advertisement
Advertisement
ಮಹಿಳಾ ಸ್ವ-ಸಹಾಯ ಸಂಘದಲ್ಲಿ ಹಲವರು ಅನಕ್ಷರಸ್ಥರಾಗಿದ್ದರು. ಹೀಗಾಗಿ ತಾಯಿ ರಶೀದಾ, ಮಗಳು ರುಕ್ಸಾನಾ ಹಾಗೂ ಅಳಿಯ ಇಸರಾಯ ಆರಂಭದಿಂದ ಸಂಘಗಳ ಎಲ್ಲ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಹೀಗಾಗಿ ವಿವಿಧ ಹಣಕಾಸು ಸಂಸ್ಥೆಗಳಿಗೆ ಫೈನಾನ್ಸ್, ಸದಸ್ಯರಿಗೂ ಇವರ ಮೇಲೆ ವಿಶ್ವಾಸ ಬಂದಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ರಶೀದಾ ಶೇಖ್ ಸದಸ್ಯರ ಹೆಸರಲ್ಲಿ ಸಾಲ ತೆಗೆದುಕೊಂಡಿದ್ದಾರೆ. ಅಲ್ಲದೆ ಕೆಲ ಸದಸ್ಯರು ಬ್ಯಾಂಕ್‍ಗೆ ಸಾಲ ಕಟ್ಟುವಂತೆ ನೀಡಿದ ಹಣವನ್ನೂ ಸಹ ಲಪಟಾಯಿಸಿದ್ದಾರೆ. ಮನೆಗೆ ಬೀಗ ಹಾಕಿ ಕುಟುಂಬಸ್ಥರೆಲ್ಲರೂ ಎಸ್ಕೇಪ್ ಆಗಿದ್ದಾರೆ ಎಂದು ವಂಚನೆಗೊಳಗಾದ ಶಾರದಾ ಹತ್ತಳ್ಳಿ ಆರೋಪಿಸಿದ್ದಾರೆ.
Advertisement
ಸಂಘದ ಮುಖ್ಯಸ್ಥೆ ರಶೀದಾ ಶೇಖ್, ಮಗ ಅಬ್ದುಲ್ ಶೇಖ್, ಮಗಳು ರುಕ್ಸಾನಾ ಶೇಖ್ ಹಾಗೂ ಅಳಿಯ ಇಸರಾಯ ಶೇಖ್ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ಮಹಿಳೆಯರು ದೂರು ದಾಖಲಿಸಿದ್ದಾರೆ. ಇತ್ತ ಸದಸ್ಯರ ಹೆಸರಲ್ಲಿ ರಶೀದಾಗೆ ಸಾಲ ನೀಡಿದ ಫೈನಾನ್ಸ್ ಕಂಪನಿಗಳು ಸಾಲ ವಾಪಸ್ಸು ಕಟ್ಟುವಂತೆ ಸದಸ್ಯರಿಗೆ ದುಂಬಾಲು ಬಿದ್ದಿದ್ದಾರೆ ಎಂದು ಫೈನಾನ್ಸ್ ಮ್ಯಾನೇಜರ್ ಉಮೇಶ್ ನಂದರಗಿ ತಿಳಿಸಿದ್ದಾರೆ.
ವಂಚನೆ ಪ್ರಕರಣ ದಾಖಲಿಸಿಕೊಂಡಿರೋ ಚಡಚಣ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇಂತಹವರ ವಿರುದ್ಧ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು. ಮುಂದೆ ಹೀಗೆ ಯಾರೂ ವಂಚನೆ ಮಾಡದಂತೆ ಹಾಗೂ ನಂಬಿ ಮೋಸ ಹೋಗದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]