ನವದೆಹಲಿ: ಹೊಸ ಸಂಚಾರ ನಿಯಮದಲ್ಲಿನ ದಂಡದಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬಳು ಪೊಲೀಸರಿಗೆ ಆತ್ಮಹತ್ಯೆ ಬೆದರಿಕೆ ಒಡ್ಡಿರುವ ಅಚ್ಚರಿ ಘಟನೆ ನಗರದಲ್ಲಿ ನಡೆದಿದೆ.
ನಗರದ ಕಾಶ್ಮಿರಿ ಗೇಟ್ ಬಳಿ ಶನಿವಾರ ಬೆಳಗ್ಗೆ ಪೊಲೀಸರು ದ್ವಿಚಕ್ರ ವಾಹನವನ್ನು ತಡೆಯುತ್ತಿದ್ದಂತೆ ಮಹಿಳೆ ಆತ್ಮಹತ್ಯೆಯ ನಾಟಕವನ್ನಾಡಿದ್ದಾಳೆ.
Advertisement
ಪೊಲೀಸ್ ಸಿಬ್ಬಂದಿ ಪ್ರಕಾರ, ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಮಹಿಳೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಗಾಡಿಯ ನಂಬರ್ ಪ್ಲೇಟ್ ಸಹ ಮುರಿದು ಬಿದ್ದಿತ್ತು. ಮಹಿಳೆ ಹಲ್ಮೆಟ್ ಸಹ ಸರಿಯಾಗಿ ಧರಿಸಿರಲಿಲ್ಲ. ಆಗ ಪೊಲೀಸರು ಆಕೆಯ ವಾಹನ ತಡೆದು ನಿಲ್ಲಿಸಿ ಈ ಕುರಿತು ಪ್ರಶ್ನಿಸಿದಾಗ ರಸ್ತೆಯಲ್ಲೇ ಸೀನ್ ಕ್ರಿಯೇಟ್ ಮಾಡಿದ್ದಾಳೆ. ಅಲ್ಲದೆ ಪೊಲೀಸರ ವಿರುದ್ಧ ಕಿರುಚಲು ಪ್ರಾರಂಭಿಸಿದ್ದಾಳೆ. ಇದನ್ನು ಓದಿ: ತಲೆಯ ಗಾತ್ರದ ಹೆಲ್ಮೆಟ್ ಸಿಗದೆ ವ್ಯಕ್ತಿಯ ಪರದಾಟ- ದಂಡ ವಿಧಿಸದೆ ಬಿಟ್ಟು ಕಳುಹಿಸಿದ ಪೊಲೀಸ್
Advertisement
ಮೊದಲಿಗೆ ಮಹಿಳೆ ದಂಡ ವಿಧಿಸದಂತೆ ಪೊಲೀಸರಲ್ಲಿ ವಿನಂತಿ ಮಾಡಿದ್ದಾಳೆ. ಆದರೆ ದಂಡ ಹಾಕಲು ಮುಂದಾದಾಗ ಕಣ್ಣೀರು ಹಾಕಲು ಪ್ರಾರಂಭಿಸಿದ್ದಾಳೆ. ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ನಾಟಕ ಮಾಡತೊಡಗಿದಳು.
Advertisement
Advertisement
ಪೊಲೀಸರ ಜೊತೆ ವಾದ ಮಾಡುವಾಗ ಅವಳು ಹೆಲ್ಮೆಟ್‍ನ್ನು ರಸ್ತೆಗೆ ಎಸೆದು ಸೀನ್ ಕ್ರಿಯೇಟ್ ಮಾಡಿದ್ದಾಳೆ. ನಂತರ ತಕ್ಷಣವೇ ಅವಳ ತಾಯಿಗೆ ಕರೆ ಮಾಡಿ ಪೊಲೀಸರು ದಂಡ ವಿಧಿಸುತ್ತಿರುವುದರ ಕುರಿತು ತಿಳಿಸಿದ್ದಾಳೆ. ಅಷ್ಟಾಗಿಯೂ ಚಲನ್ ಸ್ವೀಕರಿಸದ ಮಹಿಳೆ, ನಂತರ ನೇಣು ಬಿಗಿದುಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾಳೆ. ನಾನು ಸತ್ತರೆ ನೀವು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.
ಈ ನಾಟಕ ತೀವ್ರ ಸಂಚಾರದಟ್ಟಣೆ ಇರುವ ರಸ್ತೆಯಲ್ಲಿ 20 ನಿಮಿಷಗಳಿಗೂ ಹೆಚ್ಚು ಕಾಲ ನಡೆದಿದೆ. ಬಿಸಿ ಬಿಸಿ ಚರ್ಚೆಯನ್ನು ವೀಕ್ಷಿಸಲು ದಾರಿಹೋಕರು ಸಹ ಸುತ್ತಲೂ ಆವರಿಸಿದ್ದರು. ಹಲವು ನಿಮಿಷಗಳ ರಾದ್ಧಾಂತದ ನಂತರ ಪೊಲೀಸರು ಅಂತಿಮವಾಗಿ ಅವಳಿಗೆ ದಂಡ ಚಲನ್ ನೀಡದೇ ಬಿಟ್ಟು ಕಳುಹಿಸಿದ್ದಾರೆ.