
ನವದೆಹಲಿ: ಸಾಮಾನ್ಯವಾಗಿ ಹುಟ್ಟುಹಬ್ಬ, ಮದುವೆ ದಿನವನ್ನೆಲ್ಲ ಸಂಭ್ರಮದಿಂದ ಆಚರಿಸಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ ವಿಚ್ಛೇದನ ಪಡೆದವರು ಆ ದಿನವನ್ನು ಆಚರಿಸುವುದು ಬಿಡಿ, ಅದನ್ನು ನೆನಪು ಮಾಡಿಕೊಳ್ಳಲು ಇಷ್ಟಪಡಲ್ಲ. ಆದರೆ ಇಲ್ಲೊಬ್ಬ ಮಹಿಳೆ (Woman) ತನ್ನ 4 ವರ್ಷದ ವಿಚ್ಛೇದನ ದಿನವನ್ನು (Divorce Anniversary) ಆಚರಿಸುತ್ತಿದ್ದಾಳೆ.
ಹೌದು.. ಶಾಶ್ವತಿ ಶಿವಾ ಎಂಬಾಕೆ ತನ್ನ 4ನೇ ವರ್ಷದ ವಿಚ್ಛೇದನ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾಳೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾಳೆ.
ಟ್ವೀಟ್‍ನಲ್ಲಿ ಏನಿದೆ?: ಪಾರ್ಕ್‍ನಲ್ಲಿ ಕುಳಿತು ಕಾಫಿ ಕುಡಿಯುತ್ತಿರುವ ಫೋಟೋವೊಂದನ್ನು ಹಾಕಿರುವ ಆಕೆ, 4 ವರ್ಷಗಳ ಸ್ವಾತಂತ್ರ್ಯ ಹಾಗೂ ಇದನ್ನು ಒಂದು ದಿನವು ಲಘುವಾಗಿ ತೆಗೆದುಕೊಂಡಿಲ್ಲ. ಇಂದು ವಿಚ್ಛೇದನ ದಿನದ ವಾರ್ಷಿಕೋತ್ಸವವಾಗಿದೆ. ನನಗೆ ಇದು ಸಂತೋಷದ ದಿನ ಎಂದು ಬರೆದುಕೊಂಡಿದ್ದಾಳೆ.
4 years of freedom, and not taking it for granted for a single day. Celebrating a divorce-versary today. 🥳
Happy happies to me!!! pic.twitter.com/fxcp5MFScb
— Shasvathi Siva (@shasvathi) January 23, 2023
4 ವರ್ಷಗಳ ಹಿಂದೆ ನಾನು ವಿಚ್ಛೇದನ ಪಡೆದಿದ್ದೇನೆ. ನಾನು ಪ್ರತಿವರ್ಷ ಈ ದಿನವನ್ನು ನನ್ನ ಸ್ವಾತಂತ್ರ್ಯದ ದಿನವೆಂದು ಆಚರಿಸುತ್ತೇನೆ. ಪ್ರತಿವರ್ಷ ಅದನ್ನು ಒಪ್ಪಿಕೊಳ್ಳುವುದು ನನಗೆ ನಿಜವಾಗಿಯೂ ಮುಖ್ಯವಾಗಿದೆ. ಕಳೆದ 1,460 ದಿನಗಳಲ್ಲಿ ಪ್ರತಿದಿನವೂ ಖುಷಿಯಿಂದ ಜೀವಿಸಿದ್ದೇನೆ ಎಂದು ಹೇಳಿದ್ದಾಳೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k