ಡಿವೋರ್ಸ್ 4ನೇ ವಾರ್ಷಿಕೋತ್ಸವ – ಸ್ವಾತಂತ್ರ್ಯ ದಿನ ಎಂದು ಹೇಳಿ ಸಂಭ್ರಮಿಸಿದ ಮಹಿಳೆ

Public TV
1 Min Read
divorce versary

ನವದೆಹಲಿ: ಸಾಮಾನ್ಯವಾಗಿ ಹುಟ್ಟುಹಬ್ಬ, ಮದುವೆ ದಿನವನ್ನೆಲ್ಲ ಸಂಭ್ರಮದಿಂದ ಆಚರಿಸಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ ವಿಚ್ಛೇದನ ಪಡೆದವರು ಆ ದಿನವನ್ನು ಆಚರಿಸುವುದು ಬಿಡಿ, ಅದನ್ನು ನೆನಪು ಮಾಡಿಕೊಳ್ಳಲು ಇಷ್ಟಪಡಲ್ಲ. ಆದರೆ ಇಲ್ಲೊಬ್ಬ ಮಹಿಳೆ (Woman) ತನ್ನ 4 ವರ್ಷದ ವಿಚ್ಛೇದನ ದಿನವನ್ನು (Divorce Anniversary) ಆಚರಿಸುತ್ತಿದ್ದಾಳೆ.

ಹೌದು.. ಶಾಶ್ವತಿ ಶಿವಾ ಎಂಬಾಕೆ ತನ್ನ 4ನೇ ವರ್ಷದ ವಿಚ್ಛೇದನ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾಳೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾಳೆ.

marriage divorce 3

ಟ್ವೀಟ್‍ನಲ್ಲಿ ಏನಿದೆ?: ಪಾರ್ಕ್‍ನಲ್ಲಿ ಕುಳಿತು ಕಾಫಿ ಕುಡಿಯುತ್ತಿರುವ ಫೋಟೋವೊಂದನ್ನು ಹಾಕಿರುವ ಆಕೆ, 4 ವರ್ಷಗಳ ಸ್ವಾತಂತ್ರ್ಯ ಹಾಗೂ ಇದನ್ನು ಒಂದು ದಿನವು ಲಘುವಾಗಿ ತೆಗೆದುಕೊಂಡಿಲ್ಲ. ಇಂದು ವಿಚ್ಛೇದನ ದಿನದ ವಾರ್ಷಿಕೋತ್ಸವವಾಗಿದೆ. ನನಗೆ ಇದು ಸಂತೋಷದ ದಿನ ಎಂದು ಬರೆದುಕೊಂಡಿದ್ದಾಳೆ.

4 ವರ್ಷಗಳ ಹಿಂದೆ ನಾನು ವಿಚ್ಛೇದನ ಪಡೆದಿದ್ದೇನೆ. ನಾನು ಪ್ರತಿವರ್ಷ ಈ ದಿನವನ್ನು ನನ್ನ ಸ್ವಾತಂತ್ರ್ಯದ ದಿನವೆಂದು ಆಚರಿಸುತ್ತೇನೆ. ಪ್ರತಿವರ್ಷ ಅದನ್ನು ಒಪ್ಪಿಕೊಳ್ಳುವುದು ನನಗೆ ನಿಜವಾಗಿಯೂ ಮುಖ್ಯವಾಗಿದೆ. ಕಳೆದ 1,460 ದಿನಗಳಲ್ಲಿ ಪ್ರತಿದಿನವೂ ಖುಷಿಯಿಂದ ಜೀವಿಸಿದ್ದೇನೆ ಎಂದು ಹೇಳಿದ್ದಾಳೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *