ಡಿವೋರ್ಸ್‍ನ್ನು ಫೋಟೋಶೂಟ್ ಮಾಡಿಸಿ ಸೆಲೆಬ್ರೆಟ್ ಮಾಡಿದ ಮಹಿಳೆ

Public TV
1 Min Read
Woman celebrates divorce

ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಮದುವೆಯೊಂದೇ (Wedding) ಅಲ್ಲದೇ ಪ್ರೀ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್‍ಗಳು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಮಹಿಳೆಯೂ (Woman) ವಿಚ್ಛೇದನ (Divorce) ದಿನವನ್ನು ಆಚರಿಸಿಕೊಳ್ಳಲು ಫೋಟೋಶೂಟ್ (photoshoot) ಅನ್ನು ಮಾಡಿಸಿಕೊಂಡಿದ್ದಾಳೆ.

ಲಾರೆನ್ ಬ್ರೂಕ್ ಎಂಬ ಮಹಿಳೆ ವಿಚ್ಛೇದನ ದಿನವನ್ನು ಆಚರಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ವಿಚ್ಛೇದನದ ಫೋಟೋಶೂಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ 3-4 ಫೋಟೋ ಹರಿದಾಡುತ್ತಿದೆ. ಅದರಲ್ಲಿರುವ ಮೊದಲ ಫೋಟೋದಲ್ಲಿ ಮಹಿಳೆಯೂ ಕೆಂಪು ಬಣ್ಣದ ಡ್ರೇಸ್‍ನಲ್ಲಿ ವಿಚ್ಛೇದನ ಎಂಬ ಫಲಕವನ್ನು ಹಿಡಿದಿಟ್ಟುಕೊಂಡಿದ್ದಾಳೆ. ಅಷ್ಟೇ ಅಲ್ಲದೇ ನಾನು ನಿಮಗೆ ಶುಭ ಹಾರೈಸುತ್ತೇನೆ. ಆದರೆ ನೀವು ಈಗಾಗಲೇ ಅದನ್ನು ಹೊಂದಿದ್ದೀರಿ ಎಂದು ಬರೆದುಕೊಂಡಿದ್ದಾಳೆ.

 

View this post on Instagram

 

A post shared by Pubity (@pubity)

ಅದೇ ರೀತಿ ಮತ್ತೊಂದು ಫೋಟೋದಲ್ಲಿ ಲಾರೆನ್ ತನ್ನ ಮದುವೆಯ ಡ್ರೇಸ್ ಮೇಲೆ ನಿಂತುಕೊಂಡು ಶಾಂಪೇನ್ ಬಾಟಲಿಯನ್ನು ತೆರೆಯುತ್ತಿದ್ದಾಳೆ. ಇನ್ನೊಂದರಲ್ಲಿ, ಅವಳು ತನ್ನ ಮದುವೆಯ ಡ್ರೇಸ್ ಅನ್ನು ಬೆಂಕಿಗೆ ಹಾಕುತ್ತಿದ್ದು, ಜೊತೆಗೆ ಲಾರೆನ್ ತನ್ನ ಮದುವೆಯ ಫೋಟೋ ಫ್ರೇಮ್ ಅನ್ನು ತನ್ನ ಚಪ್ಪಲಿಯಿಂದ ಒಡೆದು ಹಾಕಿದ್ದಾಳೆ. ಮತ್ತೊಂದರಲ್ಲಿ ಮದುವೆಯ ಫೋಟೋವನ್ನು ಹರಿದು ಹಾಕುತ್ತಿದ್ದಾಳೆ. ಇದನ್ನೂ ಓದಿ: ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಅಂದ್ರೂ ಓಕೆ – ರೇವಣ್ಣ

Woman celebrates divorce 1

ಈ ಫೋಟೋಶೂಟ್‍ಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್‍ಗಳನ್ನು ಮಾಡಿದ್ದಾರೆ. ಓರ್ವ ಕಾಮೆಂಟ್ ಮಾಡಿ, ನಾನು ಇದನ್ನು ಪ್ರೀತಿಸುತ್ತೇನೆ. ಅವಳಿಗೆ ಒಳ್ಳೆಯದಾಗಿದೆ. ಇದು ಅವಳ ವಿಮೋಚನೆಯಾಗಿದೆ ಎಂದು ಬರೆದುಕೊಂಡಿದ್ದಾನೆ. ಮತ್ತೊಬ್ಬ, ಇದು ಹುಚ್ಚುತನದ ಪರಮಾವಧಿ ಎಂದು ತಿಳಿಸಿದ್ದಾನೆ. ಇನ್ನೋರ್ವ ಕಾಮೆಂಟ್ ಮಾಡಿದ್ದು, ಅವಳ ಹಿಂದಿನ ಕಥೆ ನನಗೆ ತಿಳಿದಿಲ್ಲ. ಇದು ಆಘಾತದಿಂದ ಹೊರಬರಲು ಅವಳ ಮಾರ್ಗವಾಗಿದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಇರಿದಂತಾಗಿದೆ – ಕಾಗೋಡು ತಿಮ್ಮಪ್ಪ

Share This Article