ಮುಂಬೈ: ಸಂವಿಧಾನದ (Constitution) 21ನೇ ವಿಧಿಯ ಅನ್ವಯ ಪ್ರತಿಯೊಬ್ಬ ಮಹಿಳೆಯು (Women) ಸಂತಾನೋತ್ಪತ್ತಿ ಆಯ್ಕೆಯ ಹಕ್ಕು ಹೊಂದಿರುವುದರಿಂದ, ಆಕೆಗೆ ಮಗು ಹೇರಲು ಬಲವಂತ ಮಾಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ (Bombay HighCourt) ಹೇಳಿದೆ.
ಪತಿಯ ಒಪ್ಪಿಗೆಯಿಲ್ಲದೇ ಗರ್ಭಪಾತ ಮಾಡಿಸಿರುವುದು ಕ್ರೌರ್ಯ ಎಂಬ ಆಧಾರದಲ್ಲಿ ವಿಚ್ಛೇದನ ಕೋರಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಅತುಲ್ ಚಂದೂರ್ಕರ್ ಹಾಗೂ ಊರ್ಮಿಳಾ ಜೋಶಿ ಫಾಲ್ಕೆ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಇದನ್ನೂ ಓದಿ: ಕೇರಳ ದುರಂತಕ್ಕೆ ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ
ಸಂವಿಧಾನದ 21ನೇ ವಿಧಿಯ ಅನ್ವಯ ಮಹಿಳೆಯ ಸಂತಾನೋತ್ಪತ್ತಿಯ ಆಯ್ಕೆಯು ವೈಯಕ್ತಿಯ ಸ್ವಾತಂತ್ರ‍್ಯದ ಅಂಗವಾಗಿದೆ. ಆದ್ದರಿಂದ ಆಕೆಗೆ ಮುಗುವಿಗೆ ಜನ್ಮ ನೀಡುವಂತೆ ಒತ್ತಾಯ ಮಾಡಲಾಗದು. ಏಕೆಂದರೆ ಮಹಿಳೆ ವಿವಾಹದ ನಂತರ ಕೆಲಸ ಮಾಡಲು ಬಯಸಿದರೆ ಅದು ಮಾನಸಿಕ ಕ್ರೌರ್ಯವಾಗುವುದಿಲ್ಲ ಎಂದು ಹೇಳಿರುವ ನ್ಯಾಯಾಲಯವು (Court) ಅರ್ಜಿಯನ್ನು ವಜಾಗೊಳಿಸಿದೆ. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್: ಪತಿ ಜೊತೆ ದಿವ್ಯಾ ಶ್ರೀಧರ್ ಡಿಶುಂ ಡಿಶುಂ ವಿಡಿಯೋ
2001ರಲ್ಲಿ ಮದುವೆಯಾದಾಗಿನಿಂದ ಪತ್ನಿಯು ಉದ್ಯೋಗ ಮಾಡಲು ಬಯಸಿದ್ದು, ಗರ್ಭಪಾತ (Miscarriage) ಮಾಡಿಸಿಕೊಳ್ಳುವ ಮೂಲಕ ತಮ್ಮನ್ನು ಕ್ರೌರ್ಯಕ್ಕೆ ಗುರಿಪಡಿಸಲಾಗಿದೆ ಎಂದು ಅರ್ಜಿದಾರ ಪತಿ ಆರೋಪಿಸಿದ್ದರು. 2004ರಲ್ಲಿ ಪುತ್ರನೊಂದಿಗೆ ತಮ್ಮನ್ನು ತೊರೆದು ಹೋಗಿದ್ದಾರೆ. ಹಾಗಾಗಿ ವಿಚ್ಚೇದನ ಕೊಡಿಸಬೇಕು ಎಂದು ಮನವಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಪತ್ನಿ ತಾನು ಮೊದಲ ಮಗುವಿಗೆ ಜನ್ಮ ನೀಡಿ ಅದನ್ನು ಸಲಹುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ತಾನು 2ನೇ ಬಾರಿಗೆ ಗರ್ಭಿಣಿಯಾದಾಗ ಅನಾರೋಗ್ಯದ ಕಾರಣದಿಂದ ಗರ್ಭಪಾತವಾಗಿದೆ. ಆದರೆ ತನ್ನನ್ನು ಮರಳಿ ಗಂಡನ ಮನೆಗೆ ಕರೆತರಲು ಯಾವುದೇ ಪ್ರಯತ್ನ ಮಾಡಲಾಗಿಲ್ಲ. ತಾನು ಮನೆ ಬಿಡಲು ತನ್ನ ಶೀಲವನ್ನು ಶಂಕಿಸಿದ್ದು ಕಾರಣ ಎಂದು ವಾದಿಸಿದ್ದರು.
ಈ ಕಾರಣದಿಂದಾಗಿ ನ್ಯಾಯಾಲಯ ಸಣ್ಣಪುಟ್ಟ ವಿಷಯಗಳನ್ನೆಲ್ಲಾ ಕ್ರೌರ್ಯ ಎಂದು ಪರಿಗಣಿಸಲಾಗದು ಎಂದು ಹೇಳಿ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದೆ.