ಬೀಜಿಂಗ್: ಚೀನಾದಲ್ಲಿ ಮಹಿಳೆಯೊಬ್ಬರು ನಾಲ್ಕು ಚೀಲದ ತುಂಬ ಹಣ ತುಂಬಿಕೊಂಡು ಕಾರ್ ಖರೀದಿಸಲು ಹೋಗಿ ಶೋರೂಂ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ.
ಕಳೆದ ವಾರ ಶಾಂಡಾಂಗ್ ಪ್ರಾಂತ್ಯದ ನಿನ್‍ಝೋನಲ್ಲಿನ ಹೋಂಡಾ ಕಾರ್ ಡೀಲರ್‍ಶಿಪ್ ಶೋರೂಮಿನಲ್ಲಿ ಈ ಘಟನೆ ನಡೆದಿದೆ. ಮಹಿಳೆ ತಂದಿದ್ದ ಚೀಲಗಳ ತುಂಬಾ 1 ಯುವಾನ್ ಮುಖಬೆಲೆಯ ನೋಟುಗಳಿದ್ದು ಒಟ್ಟು 130,000 ಯುವಾನ್(ಅಂದಾಜು 12.50 ಲಕ್ಷ ರೂ.) ಹಣವಿತ್ತು. ಆದ್ರೆ ಇಷ್ಟು ಹಣವನ್ನ ಇಲ್ಲಿನ 20 ನೌಕರರು ಗಂಟೆಗಟ್ಟಲೆ ಎಣಿಸುವಂತಾಯ್ತು.
Advertisement
Advertisement
ಮಹಿಳೆ ಕನ್‍ಸ್ಟ್ರಕ್ಷನ್ ಬ್ಯುಸಿನೆಸ್ ನಡೆಸುತ್ತಿದ್ದು, ನಾಲ್ಕು ಚೀಲದ ತುಂಬ ಚಿಲ್ಲರೆ ಹಣವನ್ನ ಹೊಂದಿದ್ದರು. ಶೋರೂಮ್‍ನಲ್ಲಿ ಸಣ್ಣ ಮೊತ್ತದ ನೋಟುಗಳನ್ನ ಸ್ವೀಕರಿಸಲಾಗುತ್ತದೆ ಎಂದು ಗೊತ್ತಾದ ನಂತರ ಈಕೆ ಆ ಹಣದಲ್ಲಿ ಕಾರ್ ಖರೀದಿಸಲು ನಿರ್ಧರಿಸಿದ್ರು.
Advertisement
ಗ್ರಾಹಕರೊಬ್ಬರು ಕರೆ ಮಾಡಿ ಸಣ್ಣ ನೋಟುಗಳಿಂದ ಹಣ ನೀಡಬಹುದಾ ಎಂದು ಕೇಳಿದ್ರು. ನಾನು ಖಂಡಿತವಾಗಿಯೂ ನೀಡಬಹುದು ಎಂದೆ. ನಂತರ ಆಕೆ ನಗದನ್ನು ತೆಗೆದುಕೊಂಡು ಹೋಗಿ ಬನ್ನಿ ಎಂದು ಕರೆದರು. ನಾನು ಹೋಗಿ ಕಾರ್‍ನ ಡಿಕ್ಕಿ ತೆಗೆದಾಗ 1 ಯುವಾನ್ ನೋಟುಗಳ ನಾಲ್ಕು ಚೀಲಗಳನ್ನ ನೋಡಿದೆ ಎಂದು ನೌಕರರೊಬ್ಬರು ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
Advertisement
ಹಣ ಎಣಿಸುವ ಕೆಲಸ ಜಾಸ್ತಿಯಾಗಿದ್ದರಿಂದ ಶೂರೂಮ್‍ನವರು ಕೊನೆಗೆ ಮೆಕ್ಯಾನಿಕ್‍ಗಳನ್ನೂ ಸಹಾಯಕ್ಕೆ ಕೆರೆದಿದ್ದಾರೆ. ಮಹಿಳೆ 200,000 ಯುವಾನ್(ಅಂದಾಜು 19.0 ಲಕ್ಷ ರೂ.) ಮೊತ್ತದ ಕಾರ್ ಖರೀದಿ ಮಾಡಿದ್ದು ಉಳಿದ ಹಣವನ್ನು ಮೊಬೈಲ್ ಬ್ಯಾಂಕಿಂಗ್ ಮೂಲಕ ಪಾವತಿಸಿದ್ದಾರೆ ಎಂದು ವರದಿಯಾಗಿದೆ.
https://www.youtube.com/watch?time_continue=39&v=Y271nd_Uupg