ಗಾಂಧಿನಗರ: ಅಹಮದಾಬಾದ್‌ನ ಎಲಿಸ್‌ಬ್ರಿಡ್ಜ್ ಪ್ರದೇಶದ 5 ಸ್ಟಾರ್ ಹೊಟೇಲಿನಲ್ಲಿ ಮಹಿಳೆಯೊಬ್ಬರ ಸೀರೆಗೆ ಬೆಂಕಿ ತಗುಲಿದ್ದು, ಪರಿಣಾಮ ಮಹಿಳೆ ತೀವ್ರವಾದ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ.
ಮಣಿನಗರದ ಗಂಗೆಶ್ವರ್ ಸೊಸೈಟಿಯ ನಿವಾಸಿ ರಶ್ಮಿಕಾ ಶಾ(54) ಸೀರೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅವರ ದೇಹ ಬಹುಪಾಲು ಸುಟ್ಟು ಹೋಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಅವರ ಸ್ಥಿತಿ ಗಂಭಿರವಾಗಿತ್ತು. ಪೊಲೀಸರು ಇದು ಆಕಸ್ಮಿಕ ಸಾವು ಎಂಬುದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧ ಶಂಕೆ – ಪತ್ನಿಗೆ ಸಿಲಿಂಡರ್‌ನಿಂದ ಹೊಡೆದು ಹತ್ಯೆಗೈದ ಪತಿ
ಕಳೆದ ವಾರ ಮಹಿಳೆ ಹೊಟೇಲಿನಲ್ಲಿ ನಡೆದಿದ್ದ ಔತಣಕೂಟದಲ್ಲಿ ಊಟ ಮಾಡುತ್ತಿದ್ದ ಸಂದರ್ಭ ಸೀರೆಗೆ ಬೆಂಕಿ ಹೊತ್ತಿಕೊಂಡಿತ್ತು. ತೀವ್ರವಾದ ಸುಟ್ಟ ಗಾಯಗಳಾಗಿದ್ದ ಮಹಿಳೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಹಿಳೆ ಚಿಕಿತ್ಸೆಗೆ ಫಲಿಸದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೌಸ್ ಟ್ರ್ಯಾಪ್ ಹಿಡಿದು ಜನಜಾಗೃತಿಗೆ ಮಂದಾದ ಅಭ್ಯರ್ಥಿ
ಮಹಿಳೆ ತಟ್ಟೆಗೆ ಆಹಾರ ಬಡಿಸಿಕೊಳ್ಳುತ್ತಿದ್ದಾಗ ತಮ್ಮ ಸಿಂಥೆಟಿಕ್ ಸೀರೆಗೆ ಅಲ್ಲೇ ಇದ್ದ ಒಲೆಯ ಬೆಂಕಿ ತಗುಲಿದೆ. ಹೊಟೇಲ್ ಸಿಬ್ಬಂದಿ ಹಾಗೂ ಸಮಾರಂಭದಲ್ಲಿ ನೆರೆದಿದ್ದವರು ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಆಗಾಗಲೇ ಮಹಿಳೆಗೆ ತೀವ್ರವಾದ ಸುಟ್ಟ ಗಾಯಗಳಾಗಿದ್ದವು. ಹೀಗಾಗಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.