ಚಂಡೀಗಢ: ವಿಶ್ವವಿದ್ಯಾಲಯದಲ್ಲಿ (Chandigarh University) ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ (Private Video) ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋ ಕಳಿಸಿದ್ದ ಹುಡುಗಿ ಹಾಗೂ ಆಕೆಯ ಬಾಯ್‌ಫ್ರೆಂಡ್ (BoyFriend) ಇಬ್ಬರನ್ನೂ ಪಂಜಾಬ್ ಪೊಲೀಸರು (Panjab Police) ಬಂಧಿಸಿದ್ದಾರೆ.
ವಿವಿಯಲ್ಲಿ ನಡೆದ ಘಟನೆಯಿಂದಾಗಿ ಪರಸ್ಪರ ಪರಿಚಯವಿಲ್ಲದ ವಿದ್ಯಾರ್ಥಿಗಳಲ್ಲಿ ಭಾರೀ ಆತಂಕವನ್ನೇ ಉಂಟುಮಾಡಿದೆ. ತನ್ನ ವೈಯಕ್ತಿಕ ವೀಡಿಯೋವನ್ನು ಕಳಿಸಿದ್ದ ವಿದ್ಯಾರ್ಥಿನಿ ಹಾಗೂ ಬಾಯ್ ಫ್ರೆಂಡ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಹೆಚ್ಚಿನ ತನಿಖೆಗೆ ವಿಶೇಷ ತನಿಖಾ ತಂಡ (Speical Investigation Team) ನಿಯೋಜಿಸುವುದಾಗಿ ಭರವಸೆ ನೀಡಿದ್ದರೂ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಘಟನೆ ಕುರಿತು ಇಂದು ಮಧ್ಯಾಹ್ನ ಸ್ಪಷ್ಟನೆ ನೀಡಿದ್ದ ಚಂಡೀಗಢ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಆರ್.ಎಸ್ ಬಾವಾ, ವಿದ್ಯಾರ್ಥಿಗಳ 60 ಆಕ್ಷೇಪಾರ್ಹ ಎಂಎಂಎಸ್‌ಗಳು ಕಂಡುಬಂದಿದೆ ಎನ್ನುತ್ತಿರುವ ವದಂತಿ ಸಂಪೂರ್ಣ ಸುಳ್ಳು ಹಾಗೂ ಆಧಾರ ರಹಿತವಾದುದು. ವಿವಿಯಲ್ಲಿ ವಿದ್ಯಾರ್ಥಿನಿ ಚಿತ್ರೀಕರಿಸಿದ ವೈಯಕ್ತಿಕ ವೀಡಿಯೋವನ್ನು ಹೊರತುಪಡಿಸಿ, ಉಳಿದ ಯಾವುದೇ ಆಕ್ಷೇಪಾರ್ಹ ವೀಡಿಯೋಗಳು ಕಂಡುಬಂದಿಲ್ಲ. ಅಲ್ಲದೇ ವಿದ್ಯಾರ್ಥಿನಿ ತನ್ನ ವೈಯಕ್ತಿಕ ವೀಡಿಯೋವನ್ನು ತನ್ನ ಬಾಯ್‌ಫ್ರೆಂಡ್‌ಗೆ ಹಂಚಿಕೊಂಡಿದ್ದಾಳೆ ಎಂದು ಹೇಳಿದ್ದರು.
Advertisement
Advertisement
ಏನಿದು ಘಟನೆ?
ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಸುಮಾರು 60 ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವೀಡಿಯೋವನ್ನು ಸಹ ವಿದ್ಯಾರ್ಥಿನಿಯೊಬ್ಬಳು ಸೆರೆಹಿಡಿದು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿರುವುದಾಗಿ ಆರೋಪಿಸಲಾಗಿದೆ. ಈ ವೀಡಿಯೋವನ್ನು ಹರಿಬಿಟ್ಟ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀಡಿಯೋ ಸೋರಿಕೆಯಾದ ಬೆನ್ನಲ್ಲೇ ಭಾರೀ ಪ್ರತಿಭಟನೆ ಬುಗಿಲೆದ್ದಿದ್ದು, ಈ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ. ವೀಡಿಯೋ ಕಳಿಸಿದ್ದ ಹುಡುಗಿಯನ್ನು ಇಂದು ಬೆಳಗ್ಗೆ ಬಂಧಿಸಲಾಗಿತ್ತು, ನಿರಂತರ ತನಿಖೆಯಿಂದಾಗಿ ಇಂದು ರಾತ್ರಿ ಬಾಯ್‌ಫ್ರೆಂಡ್‌ನನ್ನೂ ಬಂಧಿಸಲಾಗಿದೆ.