ಪ್ರತಿಯೊಬ್ಬ ಮಹಿಳೆಗೂ ಸೀರೆ ಉಡಬೇಕೆಂಬ ಆಸೆ ಇರುತ್ತದೆ. ಮಹಿಳೆಯರು ಸೀರೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೋ, ಬ್ಲೌಸ್‍ಗೂ ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ಬ್ಲೌಸ್ ಸೀರೆಯನ್ನು ಮತ್ತಷ್ಟು ಅಂದಗೊಳಿಸುತ್ತದೆ. ಬ್ಲೌಸ್‍ಗಳಲ್ಲಿ ಬ್ಯಾಕ್‍ನೆಕ್, ಫ್ರಂಟ್ ನೆಕ್‍ನ ಹಲವಾರು ಡಿಸೈನ್‍ನ ಬಣ್ಣ, ಬಣ್ಣಗಳಿವೆ. ಇವು ಸೀರೆಯನ್ನು ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಇದಕ್ಕೆ ಸಂಬಂಧಿಸಿದ ಕೆಲವು ಡಿಸೈನ್‍ಗಳ ಮಾಹಿತಿಗಳು ಈ ಕೆಳಗಿನಂತಿದೆ.
ಪೋಮ್ ಪೋಮ್ ಬ್ಯಾಕ್ ನೆಕ್ ಬ್ಲೌಸ್ ಡಿಸೈನ್ಸ್
ಈ ಪೋಮ್ ಪೋಮ್ ಬ್ಲೌಸ್‍ನ ಹಿಂಭಾಗದಲ್ಲಿ ಸ್ಟ್ರಿಂಗ್‍ಗಳನ್ನು ಸೇರಿಸಲಾಗಿದ್ದು, ಕಟೌಟ್ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಬ್ಲೌಸ್ ಅನ್ನು ವಿವಿಧ ಬಣ್ಣಗಳೊಂದಿಗೆ ವಿನ್ಯಾಸಗೊಳಿಸುವುದರ ಜೊತೆಗೆ, ಹೆಚ್ಚು ವರ್ಕ್ ಮಾಡಲಾಗಿದೆ. ಸರಳವಾದ ಡಿಸೈನ್ ಬ್ಲೌಸ್ ತೊಡಲು ಇಚ್ಛಿಸುವವರು ಪೋಮ್ ಪೋಮ್ ಬ್ಲೌಸ್ ಅನ್ನು ಆಯ್ಕೆ ಮಾಡಬಹುದು. ಇತ್ತೀಚೆಗೆ ಈ ಬ್ಲೌಸ್ ಟ್ರೆಂಡ್ ಕೂಡ ಆಗಿದೆ. ಅಲ್ಲದೇ ಈ ಬ್ಲೌಸ್‍ಗೆ ಸೂಟ್ ಆಗುವಂತಹ ಕಿವಿ ಓಲೆ, ಬ್ಯಾಗ್, ಚಪ್ಪಲಿಗಳು ಬೇಗ ಸಿಗುತ್ತದೆ.
ಬಿಲ್ಲು ಟೈ ಬ್ಲೌಸ್ ಬ್ಯಾಕ್ ನೆಕ್ ಡಿಸೈನ್ಸ್
ಹಿಂದಿನಿಂದ ಬ್ಲೌಸ್‍ನ ಬಿಲ್ಲುಗಳು ಬಹಳ ಆಕರ್ಷಕ ಲುಕ್ ನೀಡುತ್ತದೆ. ರೆಡಿಮೆಡ್ ಬ್ಲೌಸ್‍ಗಳಿಗೆ ನೀವು ಬಿಲ್ಲನ್ನು ಸೇರಿಸಬಹುದು ಮತ್ತು ಈ ಬಿಲ್ಲುಗಳನ್ನು ಬ್ಲೌಸ್ ಜೊತೆ ಸೇರಿಸಿ ಕಟ್ಟಬಹುದು. ಇದು ಬ್ಲೌಸ್‍ಗೆ ಸ್ಟೈಲಿಷ್ ಲುಕ್ ನೀಡುತ್ತದೆ. ಕಳೆದ 3 ವರ್ಷಗಳಿಂದ ಈ ಬ್ಲೌಸ್ ಟ್ರೆಂಡ್‍ನಲ್ಲಿದೆ.
ನೆಟ್ ಬ್ಯಾಕ್ ಬ್ಲೌಸ್ ಡಿಸೈನ್ಸ್
2016ರಲ್ಲಿ ಈ ಬ್ಲೌಸ್ ಡಿಸೈನ್ ಸಖತ್ ಫೇಮಸ್ ಆಗಿತ್ತು. ಅಂದಿನಿಂದ ಇಂದಿನವರೆಗೂ ನೆಟ್ ಬ್ಯಾಕ್ ಬ್ಲೌಸ್ ಡಿಸೈನ್ಸ್ ಫ್ಯಾಷನ್‍ನ ಟಾಪ್ ಲಿಸ್ಟ್‍ನಲ್ಲಿದೆ. ಇದರಲ್ಲಿ ಬ್ಲೌಸ್‍ನ ಹಿಂಭಾಗ ಸಂಪೂರ್ಣ ನೆಟ್ ಡಿಸೈನ್ ಇಡಿಸಬಹುದು. ಅಲ್ಲದೇ ಬ್ಲೌಸ್ ಮದ್ಯದಲ್ಲಿ ಹೂವಿನ ಡಿಸೈನ್ ಅಥವಾ ಸಾಲಾಗಿ ಬಟನ್‍ನನ್ನು ಇಡಿಸಬಹುದು. ಒಟ್ಟಾರೆ ಬ್ಯಾಕ್ ನೆಟ್ ಬ್ಲೌಸ್ ಅನ್ನು ಅದ್ಭುತವಾಗಿ ವಿನ್ಯಾಸಗೊಳಿಸಬಹುದಾಗಿದೆ.
ಕಟ್ ಔಟ್ ಬ್ಯಾಕ್ ನೆಕ್ ಬ್ಲೌಸ್ ಡಿಸೈನ್ಸ್
ನೀವು ಸಖತ್ ಬೋಲ್ಡ್ ಆಗಿ ಕಾಣಿಸಲು ಇಷ್ಟಪಡುವುದಾದರೆ ಈ ಬ್ಲೌಸ್ ಅನ್ನು ಬಳಸಬಹುದು. ಈ ಬ್ಲೌಸ್ ಸದ್ಯ ಟ್ರೆಂಡ್‍ನಲ್ಲಿದ್ದು, ವೃತ್ತಕಾರದಲ್ಲಿ ಅಥವಾ ಇದರ ಸುತ್ತಲೂ ಕನ್ನಡಿಗಳಿಂದ ವಿನ್ಯಾಸಗೊಳಿಸಬಹುದಾಗಿದೆ. ಅಲ್ಲದೇ ಮೀನಿನ ಶೇಪ್, ತ್ರಿಕೋನಾಕಾರ, ಚದರ ಆಕಾರ ಹೀಗೆ ಹಲವು ಆಕಾರಗಳಲ್ಲಿ ಬ್ಲೌಸ್‍ನ ಹಿಂಭಾಗವನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಇದರಲ್ಲಿ ನಿಮ್ಮ ಬೆನ್ನಿನ ಬಣ್ಣಕ್ಕೆ ಸರಿ ಹೊಂದುವಂತಹ ಬ್ಲೌಸ್ ಡಿಸೈನನ್ನು ನೀವು ಆಯ್ಕೆ ಮಾಡಬಹುದಾಗಿದೆ.
ಬಟನ್ ಬ್ಲೌಸ್ ನೆಕ್ ಡಿಸೈನ್ಸ್
ಈ ಬ್ಲೌಸ್ ಸಿಂಪಲ್ ಆಗಿದ್ದರೂ ನೋಡಲು ಸುಂದರವಾಗಿ ಕಾಣಿಸುತ್ತದೆ. ಉನ್ನತ ಹುದ್ದೆಯಲ್ಲಿರುವ ಮತ್ತು ಸಮಾಜವಾದಿಗಳು ಹೆಚ್ಚಾಗಿ ಈ ಬ್ಲೌಸ್ ಅನ್ನು ಧರಿಸುತ್ತಾರೆ. ಇದರಲ್ಲಿ ಮೇಲಿನಿಂದ ಕೆಳಗಿನವರೆಗೂ ಸಾಲಾಗಿ ಗುಂಡಿಗಳಿಂದ ವಿನ್ಯಾಸಗೊಳಿಸಲಾಗಿದೆ. ರೇಷ್ಮೆ ಹಾಗೂ ನೆಟ್ ಫ್ಯಾಬ್ರಿಕ್‍ನಂತಹ ಬಟ್ಟೆಗಳಿಗೆ ಈ ಬ್ಲೌಸ್ ಫೇಮಸ್ ಎಂದೇ ಹೇಳಬಹುದು.