ಮೈಸೂರು: ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿ, ನಾನಾ ಕ್ರಿಮಿನಲ್ ಐಡಿಯಾಗಳನ್ನು ಮಾಡಿ ಮುಗ್ದ ಜನರಿಂದ ಹಣ ದೋಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಂತೆಯೇ ಇಲ್ಲೊಬ್ಬ ಅಪರಿಚಿತ ಯುವತಿ ಯುವಕನೊಬ್ಬನಿಗೆ ವೀಡಿಯೋ ಕಾಲ್ ಮಾಡಿ, ಬಳಿಕ ಅದರ ರೆಕಾರ್ಡ್‌ಗಳನ್ನು ಇಟ್ಟುಕೊಂಡು ಹಣಕ್ಕಾಗಿ ಡಿಮಾಂಡ್ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ಯುವಕ ವಾಸುವಿಗೆ ಭಾನುವಾರ ಬೆಳಗ್ಗೆ ಯುವತಿಯೊಬ್ಬಳಿಂದ ವೀಡಿಯೋ ಕಾಲ್ ಬಂದಿದೆ. ಆಕೆ ವೀಡಿಯೋ ಕಾಲ್ ಮಾಡುವುದಕ್ಕೂ ಮುನ್ನ ತನ್ನನ್ನು ಅಮೃತ ಎಂದು ಪರಿಚಯ ಮಾಡಿಕೊಂಡು ಚ್ಯಾಟ್ ಮಾಡಿದ್ದಾಳೆ. ಬಳಿಕ ವೀಡಿಯೋ ಕಾಲ್ ಮಾಡುತ್ತಲೇ ನಗ್ನಳಾಗಿದ್ದಾಳೆ. ಇದನ್ನೂ ಓದಿ: ಹಣದಾಸೆಗೆ ಮದುವೆ – ಅನಾರೋಗ್ಯದ ನೆಪ ಹೇಳಿ, ಹಣ ದೋಚಿಕೊಂಡು ಸೊಸೆ ಎಸ್ಕೇಪ್
ಇದರಿಂದ ಕಸಿವಿಸಿಗೊಂಡ ವಾಸು ತಕ್ಷಣವೇ ವೀಡಿಯೋ ಕಾಲ್ ಅನ್ನು ಕಟ್ ಮಾಡಿದ್ದಾನೆ. ಆದರೆ ಬಳಿಕ ಅದೇ ವೀಡಿಯೋ ಕಾಲ್‌ನ ರೆಕಾರ್ಡ್ ಇಟ್ಟುಕೊಂಡು ಯುವತಿ ಹಣಕ್ಕಾಗಿ ಡಿಮಾಂಡ್ ಮಾಡಿದ್ದಾಳೆ. ಹಣ ಕೊಡದೇ ಹೋದರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾಳೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಕೊಡಗಿನ 2 ಕಡೆ ಮೊಟ್ಟೆ ದಾಳಿ
ಈ ಹಿನ್ನೆಲೆ ವಾಸು ತಕ್ಷಣವೇ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಬಗ್ಗೆ ಮೈಸೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.