International
ಅರ್ಧ ಬಾಕ್ಸ್ ಚಾಕ್ಲೇಟ್ ತಿಂದಾದ್ಮೇಲೆ ಕಾಣಿಸ್ತು ಹುಳುಗಳು- ವೈರಲ್ ವಿಡಿಯೋ ನೋಡಿ

ವಾಷಿಂಗ್ಟನ್: ಚಾಕ್ಲೇಟ್ ಅಂದ್ರೆ ಯಾರಿಗೆ ತಾನೆ ಇಷ್ಟವಾಗಲ್ಲ? ಆದ್ರೆ ನೀವು ಇನ್ಮುಂದೆ ಚಾಕ್ಲೇಟ್ ತಿನ್ನೋ ಮುಂಚೆ ಹತ್ತು ಬಾರಿ ಯೋಚಿಸ್ತೀರ. ಅಮೆರಿಕದ ರೇಚಲ್ ಹಾಗೂ ಆಕೆಯ ರೂಮ್‍ಮೇಟ್‍ಗೆ ಸಹಿಯಾದ ಚಾಕ್ಲೇಟ್ ಕಹಿ ಅನುಭವ ನೀಡಿದೆ.
ಇಲ್ಲಿನೋಯ್ಸ್ ನಿವಾಸಿಯಾದ ರೇಚಲ್, ಫೆರೆರೋ ರೋಚರ್ ಚಾಕ್ಲೇಟ್ ಖರೀದಿಸಿ ತಂದಿದ್ರು. ಆಕೆ ಮತ್ತು ಆಕೆಯ ರೂಮ್ ಮೇಟ್ ಅರ್ಧ ಡಬ್ಬ ಚಾಕ್ಲೇಟ್ ತಿಂದು ಮುಗಿಸಿದ್ರು. ನಂತರ ಮತ್ತೊಂದು ಚಾಕ್ಲೇಟ್ ಕಚ್ಚಿದಾಗ ಹುಳುಗಳು ಹೊರಬಂದಿವೆ. ಇದನ್ನ ನೋಡಿ ಇಬ್ಬರಿಗೂ ಶಾಕ್ ಆಗಿದೆ. ಇದರ ಫೋಟೋ ಹಾಗೂ ವಿಡಿಯೋಗಳನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ಈಗ ವೈರಲ್ ಆಗಿದೆ. 7 ಲಕ್ಷಕ್ಕೂ ಹೆಚ್ಚು ಬಾರಿ ಈ ಫೇಸ್‍ಬುಕ್ ಪೋಸ್ಟ್ ಶೇರ್ ಆಗಿದೆ.
ಚಾಕ್ಲೇಟ್‍ವೊಂದನ್ನ ತೆಗೆದುಕೊಂಡು ಅದರ ಮೇಲಿನ ಫಾಯಿಲ್ ತೆಗೆದು ಹುಳುಗಳು ತೆವಳಾಡುತ್ತಿರೋದನ್ನ ಮಹಿಳೆ ತೋರಿಸಿದ್ದಾರೆ. ಮತ್ತೊಂದು ಚಾಕ್ಲೇಟ್ ತೆಗೆದು ನೋಡಿದಾಗ ಮತ್ತಷ್ಟು ಹುಳುಗಳು ಕಾಣಿಸಿವೆ.
Posted by Rachael Seymour on Thursday, August 31, 2017
ಇದರಿಂದ ಸಾಕಪ್ಪ ಈ ಚಾಕ್ಲೇಟ್ ಸಹವಾಸ ಎಂದುಕೊಂಡಿರೋ ಮಹಿಳೆ, ಇನ್ಯಾವತ್ತೂ ಇದನ್ನ ತಿನ್ನಲ್ಲ. ನಾನು ಮತ್ತು ನನ್ನ ರೂಮ್ ರೂಮ್‍ಮೇಟ್‍ಗೆ ಕಾಣಿಸಿದ್ದು ಇದು. ಪ್ರತಿಯೊಂದು ಚಾಕ್ಲೇಟ್‍ನಲ್ಲೂ ಹುಳುಗಳು ಎಂದು ಫೇಸ್‍ಬುಕ್ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.
ಈಗಾಗಲೇ ಈ ವಿಡಿಯೋ 5 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ವಿಡಿಯೋ ನೋಡಿದವರು ಅಸಹ್ಯ ಪಟ್ಟುಕೊಂಡಿದ್ದಾರೆ. ಬಾಕ್ಸ್ ಮೇಲೆ ಎಕ್ಸ್‍ಪೈರಿ ಡೇಟ್ ಮಾರ್ಚ್ 6, 2018 ಎಂದು ಬರೆಯಲಾಗಿದ್ದು, ಈ ಬಗ್ಗೆ ರೇಚಲ್ ಕಂಪೆನಿಗೆ ದೂರು ನೀಡಿದ್ದಾರೆ. ಆದ್ರೆ ಚಾಕ್ಲೇಟ್ ಶೇಖರಿಸಿಡಲಾದ ಜಾಗದ ಸುತ್ತಮುತ್ತ ಕೀಟಗಳು ಇದ್ದಿರಬಹುದು. ಅದಕ್ಕಾಗಿ ಈ ರೀತಿ ಆಗಿದೆ ಎಂದು ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ.
ಈ ಬಗ್ಗೆ ಸಂಸ್ಥೆಯ ವಕ್ತಾರರು ಹೇಳಿಕೆ ನೀಡಿದ್ದು, ನಮ್ಮ ಉತ್ಪನ್ನಗಳನ್ನು ಸರಿಯಾದ ಜಾಗದಲ್ಲಿ ಸ್ಟೋರ್ ಮಾಡಬೇಕು ಎಂದಿದ್ದಾರೆ. ಚಾಕ್ಲೇಟ್‍ನ ಪ್ಯಾಕೇಜಿಂಗ್ ಮೇಲೆ ಶೇಖರಿಸಲು ನಿರ್ದಿಷ್ಟ ಸ್ಥಳಗಳನ್ನ ಉಲ್ಲೇಖಿಸಲಾಗಿದ್ದು, ಅದರಂತೆ ಸ್ಟೋರ್ ಮಾಡಬೇಕು ಎಂದು ಹೇಳಿದ್ದಾರೆ.
ಫೆರೆರೋ ಚಾಕ್ಲೇಟ್‍ನ ಗುಣಮಟ್ಟದ ಬಗ್ಗೆ ನಾವು ಸಂಪೂರ್ಣ ಭರವಸೆ ನೀಡ್ತೀವಿ. ನಮ್ಮ ಗ್ರಾಹಕರಿಗಾದ ಈ ಸಮಸ್ಯೆಯನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಬಗ್ಗೆ ತನಿಖೆ ಮಾಡಲು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.
Posted by Rachael Seymour on Thursday, August 31, 2017
Posted by Rachael Seymour on Thursday, August 31, 2017
Posted by Rachael Seymour on Thursday, August 31, 2017
Posted by Rachael Seymour on Tuesday, September 5, 2017
