ಬೈರುತ್: 10 ವರ್ಷ ಭಿಕ್ಷೆ ಬೇಡುವ ಮೂಲಕ ಭಿಕ್ಷುಕಿ 6 ಕೋಟಿ ರೂ. ಸಂಪಾದಿಸಿದ ಘಟನೆಯೊಂದು ಲೆಬನಾನ್‍ನಲ್ಲಿ ನಡೆದಿದೆ.
ವಾಫಾ ಮೋಹಮ್ಮದ್ ಅವಾದ್ ಭಿಕ್ಷೆ ಬೇಡಿ ಕೋಟ್ಯಧಿಪತಿ ಆಗಿದ್ದಾಳೆ. ವಾಫಾ ಬ್ಯಾಂಕ್ ಖಾತೆಯಲ್ಲಿ 6.37 ಕೋಟಿ ರೂ. ಇದೆ. ವಾಫಾ ತನ್ನ ಹಣವನ್ನು ಬೇರೆ ಬ್ಯಾಂಕಿಗೆ ಟ್ರಾನ್ಸ್ ಫರ್ ಮಾಡುವ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ವಾಫಾ ಬ್ಯಾಂಕ್ ಖಾತೆಯಲ್ಲಿ ಇಷ್ಟು ಹಣ ಇರುವುದನ್ನು ನೋಡಿದ ಸಿಬ್ಬಂದಿ ಶಾಕ್ ಆಗಿದ್ದರು.
Advertisement
إغلاق البنك الشهير في #لبنان "جمال ترست"، يفضح قصة متسولة لبنانية معروفة في #صيدا باسم الحاجة "وفاء عوض" تبين أنها "مليونيرة" وتملك برصيدها البنكي حوالي 900 ألف دولار، بعد اضطرارها لسحب أموالها ونقلها، ليُكشف أمرها وتنتشر صور شيكات باسمها على مواقع التواصل.#مصدر_للأخبار pic.twitter.com/8XrFpRfMT2
— مصدر (@MSDAR_NEWS) October 3, 2019
Advertisement
ಮಹಿಳೆ ಹಣವನ್ನು ವರ್ಗಾವಣೆ ಮಾಡಲು ಬ್ಯಾಂಕಿಗೆ ಅರ್ಜಿ ಸಲ್ಲಿಸಿದಾಗ ಸಿಬ್ಬಂದಿ ಆಶ್ಚರ್ಯಕ್ಕೆ ಒಳಗಾಗಿದ್ದರು. ಏಕೆಂದರೆ ಆ ಮಹಿಳೆ ತನ್ನ ಚೆಕ್‍ನಲ್ಲಿ ಬರೆದಿದ್ದ ಹಣ ಆಕೆಯ ಬಳಿ ಇರಲಿಲ್ಲ. ವಾಫಾಳ ಎರಡು ಚೆಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚೆಕ್‍ನಲ್ಲಿ ಸೆಪ್ಟಂಬರ್ 30, 2019 ದಿನಾಂಕ ಬರೆಯಲಾಗಿದೆ.
Advertisement
ವಾಫಾ ಸಿಡಾನ್ ನಿವಾಸಿಯಾಗಿದ್ದು, ಆಕೆ ಇಲ್ಲಿನ ಪ್ರಸಿದ್ಧ ಆಸ್ಪತ್ರೆಯ ಮುಂದೆ ಕುಳಿತು ಇಡೀ ದಿನ ಭಿಕ್ಷೆ ಬೇಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ನರ್ಸ್‍ವೊಬ್ಬರು, ಮಹಿಳೆ ಆಸ್ಪತ್ರೆಯ ಗೇಟಿನ ಬಳಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದಳು. ಸುಮಾರು 10 ವರ್ಷಗಳಿಂದ ಮಹಿಳೆ ಭಿಕ್ಷೆ ಬೇಡುತ್ತಿದ್ದಾಳೆ. ಇಲ್ಲಿನ ಸ್ಥಳೀಯರು ಆಕೆಯನ್ನು ಭಿಕ್ಷುಕಿ ಎಂದೇ ಗುರುತಿಸುತ್ತಾರೆ ಎಂದು ಹೇಳಿದ್ದಾರೆ.