ಸ್ನಾನಕ್ಕೆಂದು ಬಾತ್‍ರೂಮಿಗೆ ಹೋದ ಮಹಿಳೆಯ ಅನುಮಾನಾಸ್ಪದ ಸಾವು

Public TV
2 Min Read
crim 1

ಚಿಕ್ಕಬಳ್ಳಾಪುರ: ಸ್ನಾನ ಮಾಡಲೆಂದು ಬಾತ್ ರೂಮ್ ಗೆ ಹೋದ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ವರದಕ್ಷಿಣೆಗಾಗಿ ಮಹಿಳೆಯನ್ನು ಕೊಲೆ ಮಾಡಿದ್ದರೆಂದು ಮೃತ ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರ ನಿವಾಸಿ ಆಶಾ(30) ಮೃತ ಮಹಿಳೆ. ವರದಕ್ಷಿಣೆ ಹಣಕ್ಕಾಗಿ ಆಶಾಳನ್ನು ಕೊಲೆ ಮಾಡಿದ್ದಾರೆಂದು ಮೃತ ಮಹಿಳೆಯ ಕುಟುಂಬದವರು ಗಂಡನ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.

crime

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಳಸೇಗೌಡನಪಾಳ್ಯದ ಆಶಾಳನ್ನು ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರ ನಿವಾಸಿ ಪೇಂಟರ್ ವೃತ್ತಿಯ ಜಯರಾಮ್‍ರಿಗೆ 2011 ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂಬತ್ತು ವರ್ಷ ಹಾಗೂ ಮೂರು ವರ್ಷ ವಯಸ್ಸಿನ ಎರಡು ಹೆಣ್ಣು ಮಕ್ಕಳಿದ್ದಾರೆ. ಮದುವೆ ಸಮಯದಲ್ಲಿ ಜಯರಾಮನಿಗೆ ವರದಕ್ಷಿಣೆ ರೂಪದಲ್ಲಿ 140 ಗ್ರಾಂ ಚಿನ್ನ ಹಾಗೂ ಜೊತೆಯಲ್ಲಿ ನಗದು ಸಹ ನೀಡಲಾಗಿತ್ತು. ಆದರೂ ಮದುವೆಯಾದ ಕೆಲವೇ ವರ್ಷಗಳಲ್ಲಿ ಗಂಡನ ಮನೆಯವರು ದೈಹಿಕ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದಾರೆಂದು ಮೃತಳ ಕುಟುಂಬದವರ ಆರೋಪಿಸಿದ್ದಾರೆ. ಇದನ್ನೂ ಓದಿ:ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

police

ಒಂದು ತಿಂಗಳ ಹಿಂದೆ ಫೋನ್ ಮಾಡಿದ ಆಶಾ ಎರಡು ಲಕ್ಷ ಹಣ ನೀಡುವಂತೆ ಗಂಡ ಜಯರಾಮ್, ಅತ್ತೆ ರತ್ನಮ್ಮ, ಜಯರಾಮ್ ಅಕ್ಕನ ಗಂಡ ನಂದಕುಮಾರ್ ಕಿರುಕುಳ ಕೊಡುತ್ತಿದ್ದರೆಂದು ಹೇಳಿದ್ದಳು. ನಮ್ಮ ಬಳಿ ಈಗ ಹಣ ಇಲ್ಲ ಎಂದಿದ್ದೆವು. ಅಂದಿನಿಂದ ಆಕೆ ನಮಗೆ ಫೋನ್ ಮಾಡಿರಲಿಲ್ಲ. ಆಗಸ್ಟ್ 24ರಂದು ಫೋನ್ ಮಾಡಿದ ಆಶಾಳ ಗಂಡ ಜಯರಾಮ್ ಆಶಾಳಿಗೆ ಫಿಡ್ಸ್ ಬಂದಿತ್ತು, ಖಾಸಗಿ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದಿದ್ದ. ನಾವು ಆಸ್ಪತ್ರೆಗೆ ಹೋದ ಮೇಲೆ ಮಗಳನ್ನು ನೋಡಲು ಬಿಡಲಿಲ್ಲ. ಬುಧವಾರ ಸಂಜೆ ಮಗಳು ಮೃತಪಟ್ಟಿರುವುದಾಗಿ ತಿಳಿಸಿ ಮೃತದೇಹ ನೋಡಲು ಬಿಟ್ಟರು. ನಮ್ಮ ಮಗಳ ಸಾವಿಗೆ ಜಯರಾಮ್ ಮತ್ತು ಮನೆಯವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ತಂತಿ ಉರುಳಿಗೆ ಸಿಲುಕಿ ಶಿರಸಿಯಲ್ಲಿ ಅಪರೂಪದ ಕಪ್ಪು ಚಿರತೆ ಸಾವು

ಆಶಾಗೆ ಒಂಭತ್ತು ವರ್ಷದ ಮಗಳಿಗೆ ಜಯರಾಮ್ ಮನೆಯವರು ಬರೆ ಹಾಕಿ ಕಿರುಕುಳ ನೀಡಿರುವುದು ಸಹ ತಿಳಿದುಬಂದಿದೆ. ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದಿದ್ದು, ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

Police Jeep 1 2 medium

ಮೃತಳ ಪೋಷಕರ ಆರೋಪದ ನಡುವೆ ಪತಿ ಜಯರಾಮ್, ಮಂಗಳವಾರ ಸ್ನಾನಕ್ಕೆಂದು ಹೋದ ಹೆಂಡತಿ ಎರಡು ಗಂಟೆಯಾದರೂ ಹೊರ ಬಾರದಿರುವುದನ್ನು ಕಂಡು ಬಾಗಿಲು ಮುರಿದು ಒಳ ಹೋಗಿ ನೋಡಿದಾಗ, ಗೀಸರ್ ವಾಸನೆಗೆ ಫಿಡ್ಸ್ ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಅಲ್ಲಿಂದ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ ಪತ್ನಿ ಮೃತಪಟ್ಟಿರುವುದಾಗಿ ಆಸ್ಪತ್ರೆಯವರು ತಿಳಿಸಿದರು. ಮಗಳ ಮೈಮೇಲಿನ ಬರೆಗಳು ಪಠ್ಯದ ಕೆಲಸಗಳನ್ನು ಸರಿಯಾಗಿ ಮಾಡದ ಕಾರಣ ನನ್ನ ಅಕ್ಕನ ಮಗ ಮಾಡಿರುವುದು. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ದೈಹಿಕ ಹಾಗೂ ಮಾನಸಿಕ ಅತ್ಯಾಚಾರಕ್ಕೆ ಕೊನೆ ಯಾವಾಗ?: ಶ್ರುತಿ

Share This Article
Leave a Comment

Leave a Reply

Your email address will not be published. Required fields are marked *