– ಒಡತಿಗೆ ನಾಯಿ ಸಾಕದಂತೆ ಆದೇಶ
– ಡೈರಿ ಸಾಕ್ಷ್ಯಕ್ಕೆ ಕೋರ್ಟ್ ಅಸ್ತು
ಲಂಡನ್: ನಾಯಿ ಅತಿಯಾಗಿ ಬೊಗಳುತ್ತದೆ ಎಂದು ನೆರೆಮನೆಯವರು ಆತ್ಮಹತ್ಯೆಗೆ ಯತ್ನಿಸಿದ ವಿಚಿತ್ರ ಪ್ರಕರಣವೊಂದು ಇಂಗ್ಲೆಂಡ್‍ನ ಆನ್‍ಸ್ಟೇ ಪ್ರದೇಶದಲ್ಲಿ ನಡೆದಿದ್ದು, ನಾಯಿ ಒಡತಿಗೆ ಕೋರ್ಟ್ ನಾಯಿ ಸಾಕುವಂತಿಲ್ಲ ಎಂದು ಆದೇಶ ನೀಡಿದೆ.
ಆನ್‍ಸ್ಟೇ ನಿವಾಸಿ, ವನೆಸ್ಸಾ ಸ್ಟೋನ್(51) ನಾಯಿ ಸಾಕಿದ್ದರು. ಅದಕ್ಕೆ ಪ್ರೀತಿಯಿಂದ ರಿಗ್ಗಿ ಎಂದು ಹೆಸರಿಟ್ಟಿದ್ದರು. ಆದರೆ ರಿಗ್ಗಿ ಸುಮ್ಮನಿರುವ ನಾಯಿಯಲ್ಲ, ಅದಕ್ಕೆ ಸದಾ ಬೊಗಳುವ ಅಭ್ಯಾಸವಿತ್ತು. ಆದ್ದರಿಂದ ಹಗಲು, ರಾತ್ರಿ ಎನ್ನದೇ ಸದಾ ಬೊಗಳುತ್ತಲೇ ಇರುತ್ತಿತ್ತು. ಯಾವಾಗಲು ನಾಯಿ ಬೊಗಳುತ್ತಿದ್ದ ಕಾರಣಕ್ಕೆ ನೆರೆಮನೆಯವರಿಗೆ ತುಂಬಾ ತೊಂದರೆ ಆಗುತ್ತಿತ್ತು. ಹೀಗಾಗಿ ಅವರು ಹಲವು ಬಾರಿ ವನೆಸ್ಸಾ ಅವರ ಬಳಿ ಕೂಡ ನಾಯಿ ಬಗ್ಗೆ ದೂರಿದ್ದರು. ಆದರೆ ವನೆಸ್ಸಾ ಅದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ನೆರೆಮನೆಯವರನ್ನು ಸಮಾಧಾನಗೊಳಿಸಿ ಕಳುಹಿಸುತ್ತಿದ್ದರು.
Advertisement
Advertisement
ಆದರೆ ರಿಗ್ಗಿ ಮಾತ್ರ ಏನೇ ಮಾಡಿದರು ಸುಮ್ಮನೆ ಇರುತ್ತಲೇ ಇರಲಿಲ್ಲ, ಬೊಗಳುತ್ತಲೇ ಇರುತ್ತಿತ್ತು. ಇದರಿಂದ ಬೇಸತ್ತ ನೆರೆಮನೆ ನಿವಾಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಹೀಗಾಗಿ ನಾಯಿ ಬಗ್ಗೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.
Advertisement
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ವನೆಸ್ಸಾ ಅವರಿಗೆ ಇನ್ಮುಂದೆ ನಾಯಿಯನ್ನೇ ಸಾಕದಂತೆ ನಿಷೇಧ ಹೇರಿದೆ. ಒಡತಿಗೆ ನಿಷೇಧ ಹೇರಿದ್ದರಿಂದ ನಾಯಿ ರಿಗ್ಗಿ ಅನಾಥವಾಗಿದ್ದು, ಕೊನೆಗೆ ಅದನ್ನು ಚಾರ್ನ್ ವುಡ್ ಬರೋ ಕೌನ್ಸಿಲ್ ವಶಕ್ಕೆ ಪಡೆದುಕೊಂಡಿದೆ.
Advertisement
ಕೋರ್ಟಿನಲ್ಲಿ ದೂರುದಾರರು ನಾಯಿ ವಿರುದ್ಧ ಒಪ್ಪಿಸಿದ ಸಾಕ್ಷಿ ವಿಚಿತ್ರವಾಗಿತ್ತು. ನಾಯಿ ಎಷ್ಟು ಬಾರಿ ಬೊಗಳಿದೆ ಎಂಬುದನ್ನು ನೆರೆಮನೆಯವರು ಡೈರಿಯಲ್ಲಿ ಬರೆದಿಟ್ಟುಕೊಂಡು ಅದನ್ನು ಕೋರ್ಟಿಗೆ ಸಲ್ಲಿಸಿದ್ದರು. ನಾಯಿ ಸಂಜೆ 6 ಗಂಟೆಯಿಂದ ಬೆಳಗಿನ ಜಾವದವರೆಗೂ ಬೊಗಳುತ್ತಲೇ ಇರುತ್ತಿತ್ತು. ಇದರಿಂದ ನನಗೆ ಸರಿಯಾಗಿ ನಿದ್ದೆ ಮಾಡಲು ಆಗುತ್ತಿರಲಿಲ್ಲ ಎಂದು ಹೇಳಿದ್ದರು.