Connect with us

Latest

ಶಾಸಕನನ್ನು ಮದ್ವೆಯಾಗಿದ್ದೀನೆಂದು ಒಡಿಶಾ ವಿಧಾನಸಭೆ ಮುಂಭಾಗ ಫಿನಾಯಿಲ್ ಕುಡಿದು ಮಹಿಳೆ ಆತ್ಮತ್ಯೆಗೆ ಯತ್ನ

Published

on

ಭುವನೇಶ್ವರ: ಒಡಿಶಾದ ವಿಧಾನಸಭೆಯ ಮುಂಭಾಗ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ವಾರದ ಹಿಂದಷ್ಟೇ ಇದೇ ಮಹಿಳೆ ಒಡಿಶಾ ಸಿಎಂ ನಿವಾಸದ ಎದುರು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಇಂದು ಮತ್ತೆ ವಿಧಾಸಭೆಯ ಮುಂಭಾಗ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಆತ್ಮಹತ್ಯೆ ಯತ್ನಿಸಿದ ಮಹಿಳೆಯನ್ನು ಸೊನಾಲಿಕಾ ಮೊಹಂತಿ ಎಂದು ಗುರುತಿಸಲಾಗಿದ್ದು, ಈಕೆ ಬಿಜೆಡಿ ಶಾಸಕ ಬ್ರಾಜಾ ಕಿಶೋರ್ ಪ್ರಧಾನ್ ಅವರ ಹೆಂಡತಿ ಎಂದು ಹೇಳಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಕಿಶೋರ್ ಪ್ರಧಾನ್ ಅವರೊಂದಿಗೆ ಗುಟ್ಟಾಗಿ ಮದುವೆಯಾಗಿರುವುದಾಗಿ ಹೇಳಿದ್ದಾರೆ. ಆದರೆ ಶಾಸಕರಾದ ಕಿಶೋರ್ ಮಹಿಳೆಯ ಆರೋಪವನ್ನು ನಿರಾಕರಿಸಿದ್ದು, ಆಕೆಯನ್ನು ಮದುವೆಯಾಗಿಲ್ಲ ಎಂದು ಹೇಳಿದ್ದಾರೆ.

ಸದನವನ್ನು ಮುಂದೂಡಲ್ಪಟ್ಟಿದ್ದ ವೇಳೆ ವಿಧಾನಸಭೆಯ ಗೇಟ್ ಬಳಿ ಆಗಮಿಸಿದ ಮೊಹಂತಿ, ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಕ್ಯಾಪಿಟಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.

ಸೆಪ್ಟೆಂಬರ್ 7ರಂದು ಮೊಹಂತಿ, ಸಿಎಂ ನಿವಾಸದ ಎದುರು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮೇ 17 ರಂದು ಶಾಸಕರ ಮನೆಯ ಗೇಟ್‍ನ ಕಂಬಿಗಳನ್ನ ಮುರಿದು ಒಳಗೆ ನುಗ್ಗಿದ್ದರು. ಅದಕ್ಕೂ ಮುಂಚೆ ಶಾಸಕರ ತವರು ಜಿಲ್ಲೆ ಅಂಗುಲ್‍ನಲ್ಲಿರುವ ಶಾಸಕರ ಮನೆ ಮುಂದೆ ಧರಣಿ ನಡೆಸಿದ್ದರು ಎಂದು ವರದಿಯಾಗಿದೆ.

ಅಲ್ಲದೆ ಮೊಹಂತಿ ಅವರು ಶಾಸಕರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಜೊತೆಗೆ ಎಸ್‍ಡಿಜೆಎಮ್ ಕೋರ್ಟ್‍ನಲ್ಲಿ ಇದೇ ವರ್ಷ ಮೇ ನಲ್ಲಿ ಪ್ರಧಾನ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in