ಸ್ಯಾಕ್ರಮೆಂಟೊ: ಮೆಕ್ಡೊನಾಲ್ಡ್ಸ್ ನಲ್ಲಿ ತೆಗೆದುಕೊಂಡಿದ್ದ ತಿಂಡಿಗೆ ಕೆಚೆಪ್ ಕಡಿಮೆಯಾಯ್ತು ಎಂದು ಮಹಿಳೆಯೊಬ್ಬಳು ಮೆಕ್ಡೊನಾಲ್ಡ್ಸ್ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿರುವ ಘಟನೆ ಬುಧವಾರದಂದು ಕ್ಯಾಲಿರ್ಫೋನಿಯದಲ್ಲಿ ನಡೆದಿದೆ.
ಕ್ಯಾಲಿರ್ಫೋನಿಯದ ಮೈರಾ (24) ಹಲ್ಲೆ ನಡೆಸಿದ ಮಹಿಳೆ. ಬುಧವಾರದಂದು ಸೇಂಟ್ ಆನಾ ಪ್ರದೇಶದ ಮೆಕ್ಡೊನಾಲ್ಡ್ಸ್ ಗೆ ಮೈರಾ ಬಂದಿದ್ದಳು. ಅಲ್ಲಿ ತಿಂಡಿ ತಿನ್ನುವಾಗ ಆಕೆ ಆರ್ಡರ್ ಮಾಡಿದ್ದ ತಿಂಡಿಗೆ ಕೆಚೆಪ್ ಸಾಲಲಿಲ್ಲ. ಈ ವೇಳೆ ನೇರವಾಗಿ ಕೆಚೆಪ್ ತರಲು ಮೈರಾ ಮೆಕ್ಡೊನಾಲ್ಡ್ಸ್ ನ ಸಿಬ್ಬಂದಿ ಇರುವಲ್ಲಿ ತೆರೆಳಿದ್ದಾಳೆ. ಆಗ ಮೆಕ್ಡೊನಾಲ್ಡ್ಸ್ ಸಿಬ್ಬಂದಿ ಗ್ರಾಹಕರಿಗೆ ಇಲ್ಲಿ ಪ್ರವೇಶವಿಲ್ಲ, ನೀವು ಹೀಗೆ ಏಕಾಏಕಿ ಒಳಗೆ ಬರಬಾರದು ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಮೈರಾ ಮೆಕ್ಡೊನಾಲ್ಡ್ಸ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಾಳೆ.
ಮಹಿಳೆ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೆಕ್ಡೊನಾಲ್ಡ್ಸ್ ಮ್ಯಾನೇಜರ್ ಮೈರಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಮಹಿಳೆಯನ್ನು ಕ್ಯಾಲಿರ್ಫೋನಿಯಾ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv