ಬಸ್ ನಿಲ್ಲಿಸದ್ದಕ್ಕೆ ಬಿಎಂಟಿಸಿ ಡ್ರೈವರ್‌ಗೆ ಚಪ್ಪಲಿಯಿಂದ ಮಹಿಳೆ ಹಲ್ಲೆ- ದೂರು ದಾಖಲು

Public TV
1 Min Read
BMTC bus

ಬೆಂಗಳೂರು: ಬಸ್ ನಿಲ್ಲಿಸದ್ದಕ್ಕೆ ಬಿಎಂಟಿಸಿ ಡ್ರೈವರ್‌ಗೆ (BMTC Driver) ಮಹಿಳಾ ಪ್ರಯಾಣಿಕರೊಬ್ಬರು ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ.

ಇದೇ ಬುಧವಾರ ಜೂ. 11ರಂದು ಟಿನ್ ಫ್ಯಾಕ್ಟರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಚರಿಸುತ್ತಿದ್ದ ಕೆಎ57, ಎಫ್ 0836 ಬಸ್‌ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 8.40ರ ಹೊತ್ತಿಗೆ ಬಸ್ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿ ಸಮೀಪ ತಲುಪಿದಾಗ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಾವ್ಯ ಎಂಬ ಮಹಿಳೆ, ಬಸ್ ಸ್ಟಾಪ್ ಇಲ್ಲದೇ ಇದ್ರೂ, ಎಲೆಕ್ಟ್ರಾನಿಕ್ ಸಿಟಿ (Electronic City) ರಸ್ತೆಯಲ್ಲಿ ಹೋಗುವಾಗ ಕಚೇರಿ ಮುಂದೆ ಬಸ್ ನಿಲ್ಲಿಸಲು ಹೇಳಿದ್ದಳು. ಇದನ್ನೂ ಓದಿ: ಗದಗ | ವರುಣನ ಆರ್ಭಟಕ್ಕೆ ಕೊಚ್ಚಿಹೋದ ಸೇತುವೆ – ಹರಿಯುವ ನೀರಿನಲ್ಲಿ ಜನರ ಹುಚ್ಚಾಟ

ಟ್ರಾಫಿಕ್‌ನಿಂದ ಬಸ್ ಡ್ರೈವರ್ ಬಸ್ ನಿಲ್ಲಿಸಿಲ್ಲ. ಆಗ ಹೊಟ್ಟೆ ಹಿಡಿದುಕೊಂಡು ಕಿರುಚಿ, ಅವಾಚ್ಯ ಶಬ್ದಗಳಿಂದ 42 ವರ್ಷದ ಚಾಲಕ ಅತಹರ್ ಹುಸೇನ್ ಅವರನ್ನು ನಿಂದಿಸಿದ್ದಳು. ಬಳಿಕ ಮಹಿಳೆ ಬಲ ಚಪ್ಪಲಿ ತೆಗೆದುಕೊಂಡು ಹೊಡೆದಿದ್ದಾಳೆ ಎಂದು ದೂರು ದಾಖಲಾಗಿದೆ. ಈ ಬಗ್ಗೆ ಬೆಳ್ಳಂದೂರು ಪೋಲಿಸ್ ಠಾಣೆಯಲ್ಲಿ ಸೆಕ್ಷನ್ 121, 131, 132, 352 ಅಡಿಯಲ್ಲಿ ದೂರು ದಾಖಲಾಗಿದೆ.

Share This Article