Connect with us

Bengaluru City

ಬೈಕ್ ನಿಲ್ಲಿಸಿದಾಗ ಹಿಂದಿನಿಂದ ಕಾರ್ ಡಿಕ್ಕಿ – ಪ್ರಶ್ನಿಸಿದ್ದಕ್ಕೆ ಯುವಕನಿಗೆ ಮಹಿಳೆಯಿಂದ ಥಳಿತ

Published

on

ಬೆಂಗಳೂರು: ನಡುರಸ್ತೆಯಲ್ಲಿ ಮಹಿಳೆಯೊಬ್ಬರು ನಿವೃತ್ತ ಡಿಫೆನ್ಸ್ ಅಧಿಕಾರಿಯ ಮಗನಿಗೆ ಹಿಗ್ಗಾ-ಮುಗ್ಗಾ ಥಳಿಸಿರೋ ಘಟನೆ ನಗರದ ಫ್ರೇಜರ್ ಟೌನ್‍ನ ಲಿಂಗರಾಜಪುರಂ ಫ್ಲೈಓವರ್ ಬಳಿ ನಡೆದಿದೆ.

ಬೈಕ್‍ನಲ್ಲಿ ತೆರಳುತ್ತಿದ್ದ ನಿವೃತ್ತ ಡಿಫೆನ್ಸ್ ಆಫಿಸರ್ ಮಗ ಇಬ್ರಾಹಿಂ ಬಾಷಾಗೆ ಮಹಿಳೆ ಹೊಡೆದಿದ್ದಾರೆ. ಟ್ರಾಫಿಕ್ ಪೊಲೀಸರು ಅಡ್ಡಹಾಕಿದ ಪರಿಣಾಮ ಇಬ್ರಾಹಿಂ ಸಡನ್ ಆಗಿ ಬೈಕ್ ನಿಲ್ಲಿಸಿದ್ದರು. ಈ ವೇಳೆ ಬೈಕ್ ಗೆ ಹಿಂಬದಿಯಿಂದ ಬರುತ್ತಿದ್ದ ಕಾರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಕಾರು ಚಾಲಕನನ್ನ ಇಬ್ರಾಹಿಂ ಪ್ರಶ್ನಿಸಿದ್ದಾರೆ.

ಈ ವೇಳೆ ಕಾರ್‍ನಲ್ಲಿದ್ದ ಮಹಿಳೆ ಇಬ್ರಾಹಿಂ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ. ನಂತರ ಕಾರಿನಲ್ಲಿದ್ದವರು ಕೂಡ ಇಬ್ರಾಹಿಂಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಬೈಕ್ ಅಡ್ಡಗಟ್ಟಿ, ಇಬ್ರಾಹಿಂಗೆ ಹೆಲ್ಮೆಟ್‍ನಿಂದ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *