ಬೆಂಗಳೂರು: ಗಾಡಿ ಟೋಯಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕಲ್ಲೇಟು ನೀಡಿದ ವಿಕಲಚೇತನ ಮಹಿಳೆಯ ಮೇಲೆ ದರ್ಪ ತೋರಿದ ಎಎಸ್‍ಐ ನಾರಾಯಣ್ ಅಮಾನತು ಮಾಡಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೆ ಗೌಡ ಅವರು, ಹಲ್ಲೆ ಸಂಬಂಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳದೆ ಹಲ್ಲೆ ಮಾಡಿರೋದು ತಪ್ಪು. ಹಾಗಾಗಿ ಸದ್ಯಕ್ಕೆ ಹಲಸೂರು ಗೇಟ್‍ನಿಂದ ಎಎಸ್‍ಐರನ್ನು ಸ್ಥಳದಿಂದ ಮ್ಯಾನೆಜ್‍ಮೆಂಟ್ ಸೆಂಟರ್‌ಗೆ ನಿಯೋಜಿಸಲಾಗಿದೆ. ಘಟನೆ ಬಗ್ಗೆ ಇಲಾಖೆ ತನಿಖೆಗೆ ಕೂಡ ಸೂಚನೆ ನೀಡಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Advertisement
Advertisement
ಘಟನೆಯೇನು?: ಟೋಯಿಂಗ್ ವಾಹನದಲ್ಲಿ ಕೂತಿದ್ದ ಹಲಸೂರ್ ಗೇಟ್ ಸಂಚಾರಿ ಟೋಯಿಂಗ್ ಎಎಸ್‍ಐ ನಾರಾಯಣ್ ಮೇಲೆ ವಿಕಲಚೇತನ ಮಹಿಳೆ ಕಲ್ಲೇಟು ನೀಡಿದ್ದಾರೆ. ಪರಿಣಾಮ ಎಎಸ್‍ಐ ಮುಖಕ್ಕೆ ಕಲ್ಲು ತಾಗಿ ರಕ್ತ ಬಂದಿದೆ. ಇದರಿಂದ ಸಿಟ್ಟಿಗೆದ್ದ ಎಎಸ್‍ಐ, ಕೂಡಲೇ ವಾಹನದಿಂದ ಕೆಳಗಿಳಿದು ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಬೂಟಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಗಾಡಿ ಟೋಯಿಂಗ್ ಮಾಡ್ತಿದ್ದ ASIಗೆ ಕಲ್ಲೇಟು- ವಿಕಲಚೇತನ ಮಹಿಳೆಗೆ ಬೂಟಿನಿಂದ ಒದ್ದ ನಾರಾಯಣ್
Advertisement
Advertisement
ಜ.24 ರಂದು ನಡೆದಿರುವ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಬೆಳಕಿಗೆ ಬಂದಿದೆ. ಎಎಸ್‍ಐ ಮೇಲೆ ಮಹಿಳೆ ಎರಡು ಬಾರಿ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಮಹಿಳೆ ಹಲ್ಲೆಯಿಂದ ಕೋಪಗೊಂಡ ಎಎಸ್‍ಐ ನಿಂದಲೂ ಮಹಿಳೆ ಮೇಲೆ ರಸ್ತೆಯಲ್ಲೆ ಹಲ್ಲೆಗೈದಿರುವುದಾಗಿ ತಿಳಿದುಬಂದಿದೆ. ಘಟನೆ ಬಳಿಕ ಎಎಸ್ ಐ ನಾರಾಯಣ್ ಅವರು ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ಹಲ್ಲೆ ಆರೋಪದಡಿ ಮಹಿಳೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ತಪಾಸಣೆ ನೆಪದಲ್ಲಿ ಮಹಿಳಾ ರೋಗಿಗೆ ಕಿರುಕುಳ – ವೈದ್ಯನ ವಿರುದ್ಧ ದೂರು