ನೆಲಮಂಗಲ: ರಸ್ತೆ ದುರಸ್ತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆ ವೇಳೆ ಮಹಿಳೆ (Woman) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ನೆಲಮಂಗಲ (Nelamangala) ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜನಸಾಮಾನ್ಯರು ಓಡಾಡುವ ಅನುಮತಿ ರಸ್ತೆ ಸರಿ ಮಾಡಿಸುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದೆ. ಈ ವೇಳೆ ದೊಣ್ಣೆ ಕಲ್ಲುಗಳಿಂದ ಗ್ರಾಮದ ನಾಗರತ್ನ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರೇಮ್ ಕುಮಾರ್, ಜಯಮ್ಮ, ಮಹಿಮೆಗೌಡ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಲವ್ವರ್ ನೋಡಲು ಬಂದ ಯುವಕನಿಗೆ ಥಳಿಸಿ ಹತ್ಯೆ; ಮನನೊಂದು ಕತ್ತು ಕೊಯ್ದುಕೊಂಡ ಪ್ರೇಯಸಿ
ಗ್ರಾಮದ ರಸ್ತೆಯಲ್ಲಿ ಮಳೆಯಿಂದ ಗುಂಡಿಗಳು ಬಿದ್ದಿದ್ದು, ಜನ ಸಂಚಾರಕ್ಕೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ ರಸ್ತೆಗೆ ಮಣ್ಣು ಹಾಕಿ ಸರಿ ಮಾಡಲು ಜನರೇ ಮುಂದಾಗಿದ್ದರು. ರಸ್ತೆ ದುರಸ್ತಿ ಮಾಡದಂತೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ್ದಾರೆ ಎಂದು ನಾಗರತ್ನಮ್ಮ ಆರೋಪಿಸಿದ್ದಾರೆ.
ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮಹಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಮಗುವಿನ ಎದುರೇ ಪತ್ನಿಯನ್ನು ಥಳಿಸಿ ಕೊಂದ ಪತಿ

