ದಾವಣಗೆರೆ: ಪತಿ ಹಾಗೂ ಅತ್ತೆ ಸೇರಿ ಸೊಸೆಗೆ ಚಾಕು ಇರಿದಿರುವ ಘಟನೆ ಜಿಲ್ಲೆಯ ಶಾಮನೂರು ಗ್ರಾಮದಲ್ಲಿ ನಡೆದಿದೆ.
ನಿರ್ಮಲ ಚಾಕು ಇರಿತಕ್ಕೆ ಒಳಗಾದ ಮಹಿಳೆ. ಈ ಘಟನೆ ಎರಡು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಪತಿ ಮಧು ಮತ್ತು ಅತ್ತೆ ನೀಲಮ್ಮ ಮದುವೆಯ ಬಳಿಕ ನಿರ್ಮಲರಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು.
ಪತಿ ಮತ್ತು ಅತ್ತೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಿದ್ದಾರೆ. ನಿರ್ಮಲ ಇದ್ದಕ್ಕೆ ನಿರಾಕರಿಸಿದ್ದಕೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪತ್ನಿ ಮನೆಬಿಟ್ಟು ಹೋಗಬೇಕು. ಆಗ ತಾನು ಇನ್ನೊಂದು ಮದುವೆಯಾಗಬಹುದು ಎಂಬ ಉದ್ದೇಶದಿಂದ ಈ ರೀತಿ ಮನೆಯಲ್ಲಿ ಮಲಗಿದ್ದ ವೇಳೆ ಗುಂಪ್ತಾಂಗಕ್ಕೆ ಕಾಲಿನಿಂದ ಒದ್ದು, ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ ಅಂತಾ ನಿರ್ಮಲ ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಮಹಿಳಾ ಠಾಣೆಗೆ ದೂರು ನೀಡಿದರು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಇತ್ತ ಹಲ್ಲೆಗೊಳಗಾದ ಮಹಿಳೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.