ಗಾಂಧಿನಗರ: ತನ್ನನ್ನು ಗುರಾಯಿಸಿಕೊಂಡು ನೋಡುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಿದ 28 ವರ್ಷದ ಮಹಿಳೆ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ ಕಿರುಕುಳ ನೀಡಿರುವ ಘಟನೆ ಶನಿವಾರ ರಾತ್ರಿ ಅಹಮದಾಬಾದ್ನ ಥಾಲ್ತೇಜ್ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಆಕೆಯ ಪತಿ ಕೆಲಸಕ್ಕೆ ಹೋಗಿದ್ದ ವೇಳೆ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದು, ಈ ಕುರಿತಂತೆ ಸಂತ್ರಸ್ತೆ ಆರೋಪಿ ವಿರುದ್ಧ ಸೋಲಾ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತಹಶೀಲ್ದಾರ್ ಮೇಲೆ ಪೆಟ್ರೋಲ್ ಎರಚಿ ಜೀವ ಬೆದರಿಕೆ ಹಾಕಿದ ಮಾಜಿ ಬಿಜೆವೈಎಂ ನಾಯಕ
Advertisement
Advertisement
ಬೆಳಗ್ಗೆ 8.30ರ ಸುಮಾರಿಗೆ ತನ್ನ ಮನೆಯ ಬಾಲ್ಕನಿಯಲ್ಲಿ ಕುಳಿತುಕೊಂಡಿದ್ದ ವೇಳೆ ಆರೋಪಿ ಸಾಹಿಲ್ ಠಾಕೋರ್ ತಿರುಗಾಡುತ್ತಿರುವುದನ್ನು ಸಂತ್ರಸ್ತೆ ಗಮನಿಸಿದ್ದಾರೆ. ನಂತರ ಆತ ತನ್ನತ್ತ ನೋಡಲು ಆರಂಭಿಸಿ, ಅಹಿತಕರ ಮತ್ತು ಅಶ್ಲೀಲ ಸನ್ನೆಗಳನ್ನು ತೋರಿಸಿದ್ದಾನೆ.
Advertisement
ನಂತರ ಸಿಟ್ಟಿಗೆದ್ದ ಮಹಿಳೆ ಆತನ್ನನ್ನು ತನ್ನತ್ತ ನೋಡುವುದನ್ನು ನಿಲ್ಲಿಸಿ ಹೋಗುವಂತ ಹೇಳಿ ನೆರೆಹೊರೆಯವರನ್ನು ಕರೆಯುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಆದರೆ ಇದಕ್ಕೂ ಹೆದರದ ವ್ಯಕ್ತಿ, ಬದಲಾಗಿ ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೂ ಯತ್ನಿಸಿದ್ದಾನೆ. ಇದನ್ನೂ ಓದಿ: 8 ತಿಂಗಳ ಮಗುವಿನ ಮೇಲೆ ಹಲ್ಲೆಗೈದ Caretaker – ಮೆದುಳಿನಲ್ಲಿ ರಕ್ತಸ್ರಾವ
Advertisement
ಸಂತ್ರೆಸ್ತೆಯ ಪತಿ ಮನೆಗೆ ಹಿಂದಿರುಗಿದ ಬಳಿಕ ಆರೋಪಿ ತನ್ನ ಸಹಚರರೊಂದಿಗೆ ಥಳಿಸಿ, ದಂಪತಿಗೆ ಬೆದರಿಕೆಯೊಡ್ಡಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ, ಆರೋಪಿ ಮತ್ತು ಇತರ ಮೂವರ ವಿರುದ್ಧ ಕಿರುಕುಳ, ನೋವುಂಟುಮಾಡುವುದು, ನಿಂದನೀಯ ಭಾಷೆ ಬಳಕೆ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.