ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮಾವೇಶದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಬುರ್ಖಾ ಧರಿಸಿ ಭಾಗಿಯಾಗಿದ್ದರು. ಈ ವೇಳೆ ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳು ಸಾರ್ವಜನಿಕವಾಗಿ ಮಹಿಳೆಯ ಬುರ್ಖಾವನ್ನು ತೆಗೆಸಿದ್ದಾರೆ.
ಮಂಗಳವಾರ ಬಲಿಯಾ ಎಂಬಲ್ಲಿ ಸ್ಥಳೀಯ ಚುನಾವಣೆ ಪ್ರಯುಕ್ತ ಬಿಜೆಪಿ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಿತ್ತು. ಬಿಜೆಪಿ ಕಾರ್ಯಕರ್ತೆಯಾಗಿರುವ ಮುಸ್ಲಿಂ ಮಹಿಳೆಯೂ ಸಮಾವೇಶದಲ್ಲಿ ಕಪ್ಪು ಬಣ್ಣದ ಬುರ್ಖಾ ಧರಿಸಿ ಭಾಗಿಯಾಗಿದ್ದರು.
Advertisement
Advertisement
ನನ್ನ ಬಳಿ ಬಂದ ಮಹಿಳಾ ಪೊಲೀಸ್ ಅಧಿಕಾರಿಗಳು ಬುರ್ಖಾ ತೆಗೆಯುವಂತೆ ಹೇಳಿದರು. ಆದರೆ ಯಾವ ಕಾರಣಕ್ಕೆ ಎಂದು ತಿಳಿಸಲಿಲ್ಲ. ಕೊನೆಗೆ ನಾನು ಸಾರ್ವಜನಿಕವಾಗಿ ಬುರ್ಖಾ ತೆಗೆದೆ ಎಂದು ಮುಸ್ಲಿಂ ಮಹಿಳೆ ತಿಳಿಸಿದ್ದಾರೆ. ಮಹಿಳೆ ಈ ವಿಷಯದ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿಲ್ಲ. ದಿಢೀರ್ ಅಂತಾ ಎಲ್ಲರೆದರು ಬುರ್ಖಾ ತೆಗೆಸಿದಕ್ಕೆ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
Advertisement
ಈ ಘಟನೆ ಬಗ್ಗೆ ನನಗೆ ಇದೂವರೆಗೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಮುಖ್ಯಮಂತ್ರಿಗಳು ಭಾಗಿಯಾಗುವ ಸಮಾವೇಶದಲ್ಲಿ ಯಾರು ಕಪ್ಪು ಬಟ್ಟೆಯನ್ನು ತೋರಿಸದಂತೆ ನಮಗೆ ಆದೇಶಿಸಲಾಗಿತ್ತು. ಈ ಘಟನೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬಲಿಯಾ ಎಸ್‍ಪಿ ಅನಿಲ್ ಕುಮಾರ್ ಹೇಳಿದ್ದಾರೆ.
Advertisement
ಮುಖ್ಯಮಂತ್ರಿಗಳು ಶನಿವಾರ ಮೀರತ್ ನಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿಎಂ ಭಾಷಣ ಮಧ್ಯದಲ್ಲಿ ಕೆಲವರು ಎದ್ದು ನಿಂತು ಕಪ್ಪು ಬಾವುಟ ತೋರಿಸುವ ಮೂಲಕ ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಅವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಸಮಾವೇಶದಲ್ಲಿ ಸಿಎಂ ಬರುವ ಮುನ್ನ ಪೊಲೀಸ್ ಅಧಿಕಾರಿಗಳು ಭದ್ರತಾ ದೃಷ್ಟಿಯಿಂದ ಮಹಿಳೆ ಧರಿಸಿದ್ದ ಬುರ್ಖಾ ತೆಗೆಸಿದ್ದಾರೆ ಎಂದು ಹೇಳಲಾಗಿದೆ.
At Yogi Adityanath's rally, cops make woman remove burqa https://t.co/wgk9q6pFI8 pic.twitter.com/8ixJSOaxgH
— NDTV (@ndtv) November 21, 2017
https://twitter.com/MuslimWomanNews/status/933234110171987969