ಡಾ.ಬಿ.ಆರ್ ಅಂಬೇಡ್ಕರ್‌ಗೆ ಅವಮಾನ – ವೀಡಿಯೋ ಹರಿಬಿಟ್ಟ ಯುವತಿ ಅರೆಸ್ಟ್

Public TV
1 Min Read
DR B R AMBEDKAR

ತುಮಕೂರು: ಯುವತಿಯೋರ್ವಳು ಡಾ.ಬಿ.ಆರ್ ಅಂಬೇಡ್ಕರ್‌ಗೆ (Dr.B.R.Ambedkar) ಅವಮಾನ ಮಾಡಿ ನಿಂದನೆಯ ವೀಡಿಯೋ ಹರಿಬಿಟ್ಟಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

ವೇದಾವತಿ ಬಂಧಿತ ದಲಿತ (Dalits) ಯುವತಿ. ಈಕೆ ತುಮಕೂರು ಜಿಲ್ಲೆ ಕ್ಯಾತಸಂದ್ರ ಸಮೀಪದ ಕಲ್ಲಹಳ್ಳಿ ಗ್ರಾಮಕ್ಕೆ ಸೇರಿದವಳಾಗಿದ್ದು, ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಳು. ಇದೀಗ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ನನಗೆ ಅನ್ಯಾಯವಾಗಿದೆ. ಇದಕ್ಕೆ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಕಾರಣ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ವೀಡಿಯೋ ಹರಿ ಬಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದನ್ನೂ ಓದಿ: ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿದವನಿಗೆ ಮಹಿಳೆಯಿಂದ ಚಪ್ಪಲಿ ಸೇವೆ

ಈ ಬಗ್ಗೆ ದಸಂಸ ವೇದಾವತಿ ವಿರುದ್ಧ ಎನ್.ಇ.ಪಿ.ಎಸ್ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಯುವತಿಯನ್ನು ಎನ್.ಇ.ಪಿ.ಎಸ್ ಪೊಲಿಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗ್ಯಾಸ್ ಏಜೆನ್ಸಿ ಸಮೀಪದ ಸ್ಕ್ರಾಪ್ ಗೋಡೌನಲ್ಲಿ ಅಗ್ನಿ ಅವಘಡ

Share This Article