ಬೆಂಗಳೂರು: ಕಳ್ಳತನ ಮಾಡಲು ಗಂಡನಿಗೆ ಪ್ರೇರೇಪಣೆಕೊಟ್ಟು ಬಳಿಕ ತಲೆಮರೆಸಿಕೊಂಡಿದ್ದ ಹೆಂಡತಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಮಹಾದೇವಿ ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್‍ನ ಎರಡನೇ ಹೆಂಡತಿಯಾಗಿದ್ದಾಳೆ. ಒಂದು ತಿಂಗಳ ಹಿಂದೆಯಷ್ಟೇ ಆರೋಪಿ ಅಚ್ಯುತ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದರು. ಪತಿಯ ಬಂಧನದ ಬಳಿಕ ಪತ್ನಿ ಮಹಾದೇವಿ ಪರಾರಿಯಾಗಿ ಅನಾಥಾಶ್ರಮ ಸೇರಿದ್ದಳು. ಇದೀಗ ಖಚಿತ ಮಾಹಿತಿ ಪಡೆದ ಕೆಂಗೇರಿ ಪೊಲೀಸರು ಮಹಾದೇವಿಯನ್ನು ಬಂಧಿಸಿದ್ದಾರೆ.
Advertisement
Advertisement
ಆರೋಪಿ ಮಹಾದೇವಿ ಐಷಾರಾಮಿ ಜೀವನಕ್ಕಾಗಿ ತನ್ನ ಮೊದಲ ಪತಿಗೆ ಕೈಕೊಟ್ಟು ನಂತರ ಅಚ್ಯುತ್ ಕುಮಾರ್ ನನ್ನು ಮದುವೆಯಾಗಿದ್ದಳು. ಅಲ್ಲದೇ ದಿನಕ್ಕೆ ಕನಿಷ್ಟ 3-4 ಸರಗಳ್ಳತನ ಮಾಡುವಂತೆ ಪತಿ ಅಚ್ಯುತ್ ಕುಮಾರ್ ನನ್ನು ಒತ್ತಾಯಿಸಿದ್ದಳು. ಪತ್ನಿಯ ಮಾತಿನಂತೆ ಅಚ್ಯುತ್ ಕಳ್ಳತನ ಮಾಡುತ್ತಿದ್ದನು. ಒಂದೇ ವರ್ಷದಲ್ಲಿ ಅಚ್ಯುತ್ ಕುಮಾರ್ ಸುಮಾರು ಒಂದೂವರೆ ಕೋಟಿ ರೂ. ಬೆಲೆ ಬಾಳುವಷ್ಟು ಸರಗಳ್ಳತನ ಮಾಡಿದ್ದನು. ಆದರೆ ಮೂರು ತಿಂಗಳ ಹಿಂದೆ ನೈಸ್ ರೋಡ್ ಬಳಿ ಆರೋಪಿ ಅಚ್ಯುತ್ ಕಾಲಿಗೆ ಗುಂಡು ಹಾರಿಸಿ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಅಂದಿನಿಂದಲೂ ಪತ್ನಿ ಮಹಾದೇವಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದನ್ನೂ ಓದಿ: 150 ಕೇಸ್ ನಲ್ಲಿ ಬೇಕಾಗಿದ್ದ ಆರೋಪಿಗೆ ಶೂಟ್, ಅರೆಸ್ಟ್ – ಡಿಸಿಪಿ ರವಿ ಡಿ.ಚನ್ನಣ್ಣನವರಿಂದ ತಂಡಕ್ಕೆ ಬಹುಮಾನ ಘೋಷಣೆ
Advertisement
Advertisement
ಅಚ್ಯುತ್ ಕುಮಾರ್ ವಿರುದ್ಧ ಸುಮಾರು ಬೆಂಗಳೂರಿನಲ್ಲಿ 70 ಸರಗಳ್ಳತನ ಕೇಸ್ ಗಳು ದಾಖಲಾಗಿದೆ. ಆದರೆ ರಾಜ್ಯದ ಇತರ ಜಿಲ್ಲೆಗಳೂ ಸೇರಿ ಒಟ್ಟು 150 ಕ್ಕೂ ಹೆಚ್ಚು ಕೇಸ್ ಆರೋಪಿ ಅಚ್ಯುತ್ ಮೇಲೆ ದಾಖಲಾಗಿದೆ. ಅಷ್ಟೇ ಅಲ್ಲದೇ ಬಂಧನಕ್ಕೂ ಮುನ್ನ ತುಮಕೂರಿನಲ್ಲಿ ಮೂರು ಕಡೆ ಸರಗಳ್ಳತನ ಮಾಡಿದ್ದನು. ಜೂನ್ 17 ರಂದು ಸರಗಳ್ಳ ಅಚ್ಯುತ್ ಕುಮಾರ್ ನನ್ನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಸರಗಳ್ಳನ ಮೇಲೆ ಶೂಟೌಟ್- ಚಿನ್ನದ ಸರದ ಗಣಿಯೇ ಪತ್ತೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv