ಬೆಂಗಳೂರು: ಕೋಲ್ಕತ್ತಾದಿಂದ (Kolkata) ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ (IndiGo) ವಿಮಾನದಲ್ಲಿ ಯುವತಿಯೊಬ್ಬಳು ಸಿಗರೇಟ್ (Cigarette) ಸೇದಿ ಆತಂಕ ಮೂಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾ. 5ರಂದು 6ಇ716 ವಿಮಾನ ರಾತ್ರಿ 9.50ಕ್ಕೆ ಕೋಲ್ಕತ್ತಾದಿಂದ ಹೊರಟು ಬೆಂಗಳೂರಿನಲ್ಲಿ (Bengaluru) ಲ್ಯಾಂಡ್ ಆಗಲು ಅರ್ಧ ಗಂಟೆ ಬಾಕಿ ಇತ್ತು. ಆಗ ಪಶ್ಚಿಮ ಬಂಗಾಳದ ಯುವತಿ ಪ್ರಿಯಾಂಕ ಚಕ್ರವರ್ತಿ (24) ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಹಚ್ಚಿದ್ದಾಳೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಶೌಚಾಲಯದ ಬಾಗಿಲು ತೆಗಿಸಿದ್ದಾರೆ. ಸಿಗರೇಟನ್ನು ಡಸ್ಟ್‌ಬಿನ್‌ಗೆ ಹಾಕಿ ನೀರು ಸುರಿದಿದ್ದಾರೆ. ಇದನ್ನೂ ಓದಿ: ಸಿಂಗಾಪುರದಲ್ಲಿ ಮಹಿಳೆಯರಿಗೆ ಕಿರುಕುಳ ಆರೋಪ- ಭಾರತ ಮೂಲದ ಯೋಗಾ ಶಿಕ್ಷಕನ ವಿಚಾರಣೆ
Advertisement
Advertisement
ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪ್ರಿಯಾಂಕರನ್ನು ಭದ್ರತಾ ವಿಭಾಗಕ್ಕೆ ಒಪ್ಪಿಸಲಾಗಿದೆ. ಪ್ರಯಾಣಿಕರ ಜೀವ ಮತ್ತು ವಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡಿದ ಆರೋಪದಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (International Airport) ಪೊಲೀಸರು ಪ್ರಿಯಾಂಕ ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ, ತನಿಖೆಗೆ ಇಳಿದ ಅರಣ್ಯ ಇಲಾಖೆ