ಮುಂಬೈ: ಮಹಿಳೆಯೊಬ್ಬಳು ತನ್ನ ಪತಿಯ ಎರಡನೇ ಹೆಂಡತಿಯನ್ನು ಕೊಲೆ ಮಾಡಿದ ಅರೋಪದ ಮೇಲೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಥಾಣೆಯ ಕಲ್ಯಾಣ ನಿವಾಸಿಯಾದ 28 ವರ್ಷದ ಮಹಿಳೆ ಯಾಸ್ಮಿನ್ ಪತಿಯ ಎರಡನೇ ಹೆಂಡತಿಯನ್ನು ಕತ್ತು ಹಿಸುಕು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
Advertisement
ಯಾಸ್ಮಿನ್ ಹಾಗೂ ಪತಿ ವಾಹಿದ್ನ ವೈವಾಹಿಕ ಜೀವನ ಚೆನ್ನಾಗಿರಲಿಲ್ಲ. ವಾಹಿದ್ ತನ್ನ ಇಬ್ಬರು ಪತ್ನಿ ಹಾಗೂ ಮಕ್ಕಳೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದ. ಯಾಸ್ಮಿನ್ ಇತ್ತೀಚೆಗೆ ವಾಹಿದ್ನೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಳು. ಅಲ್ಲದೆ ಫೋನ್ನಲ್ಲೇ ಮೌಖಿಕವಾಗಿ ತಲಾಖ್ ಹೇಳಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
Advertisement
ಆದ್ರೆ ಕೆಲವು ದಿನಗಳ ಬಳಿಕ ಯಾಸ್ಮಿನ್ ಗಂಡನ ಮನೆಗೆ ಹಿಂದಿರುಗಿ ಆತನೊಂದಿಗೆ ಜೀವನ ನಡೆಸುತ್ತಿದ್ದಳು. ಕಳೆದ ಶುಕ್ರವಾರ ಯಾಸ್ಮಿನ್ ಹಾಗೂ ವಾಹಿದ್ನ ಎರಡನೇ ಪತ್ನಿ ರೇಷ್ಮಾ(25) ನಡುವೆ ಜಗಳವಾಗಿತ್ತು. ಜಗಳ ತಾರಕಕ್ಕೇರಿ ಯಾಸ್ಮಿನ್ ಕೋಪದಲ್ಲಿ ಒಂದು ಬಟ್ಟೆಯಿಂದ ರೇಷ್ಮಾಳ ಕತ್ತು ಹಿಸುಕಿದ್ದಾಳೆ ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಕೋಪ್ಕರ್ ಹೇಳಿದ್ದಾರೆ.
Advertisement
ಯಾಸ್ಮಿನ್ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ಯಾಸ್ಮಿನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಡಗಿನ ಹಾಕಿ ಆಟಗಾರನನ್ನು 7 ಬಾರಿ ಚಾಕುವಿನಿಂದ ಇರಿದು ಕೊಲೆಗೈದ 2ನೇ ಪತ್ನಿ! https://t.co/1dSDiOpJ1u#ApaiyyaChenand #Murder #hockeyplayer #Kodagu pic.twitter.com/kGJ1YDMaqV
— PublicTV (@publictvnews) August 20, 2017