ಚಂಡೀಗಢ: ಮೂವರು ವ್ಯಕ್ತಿಗಳು ನನ್ನ ಗಂಡನ ನಿರ್ದೇಶನದಂತೆ ನನ್ನ ಮೇಲೆ ಅತ್ಯಾಚಾರವೆಸಗಿದ್ರು ಎಂದು ಹರಿಯಾಣದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
Advertisement
ಜುಲೈ 29ರಂದು ನಮಗೆ ಅತ್ಯಾಚಾರ ಸಂತ್ರಸ್ತೆಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆಂದು ಗೊತ್ತಾಯಿತು. ನಮ್ಮ ಅಧಿಕಾರಿಗಳು ಅಲ್ಲಿಗೆ ಹೋಗಿದ್ರು ಮತ್ತು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ಗಂಡ, ಅತ್ತೆ ಸೇರಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಎಸ್ಪಿ ರತನ್ದೀಪ್ ಸಿಂಗ್ ಬಾಲಿ ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಅತ್ಯಾಚಾರವೆಸಗಿದ ನಂತರ ಆರೋಪಿಗಳು ನನ್ನನ್ನು ನಗ್ನವಾಗಿ ರಸ್ತೆಗೆಸೆದರು ಅಂತ ಸಂತ್ರಸ್ತ ಮಹಿಳೆ ಹೇಳಿದ್ದಾರೆ. ನನ್ನ ಗಂಡನಿಗೆ ವಿಚ್ಛೇದನ ಕೊಡಲು ನಿರಾಕರಿಸಿದೆ. ಅದಕ್ಕೆ ಅವರು ತನ್ನ ಮೂವರು ಸ್ನೇಹಿತರನ್ನ ಕರೆಸಿದ್ರು. ಅವರೆಲ್ಲ ಯಾರೆಂದು ನನಗೆ ಗೊತ್ತಿಲ್ಲ. ನಾನು ಓಡಿಹೋದೆ. ಆದ್ರೆ ಅವರು ನನ್ನನ್ನು ಅಪಹರಿಸಿ, ಹತ್ತಿರದ ಜೀಮೀನೊಂದರ ಬಳಿ ಎಳೆದುಕೊಂಡು ಹೋಗಿ ಗನ್ ತೋರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ರು ಎಂದು ಮಹಿಳೆ ಹೇಳಿದ್ದಾರೆ.
Advertisement
ಮೂವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ.
#Haryana: Woman alleges rape by three men with the involvement of her husband in Sirsa, says the culprits threw her naked on the road. pic.twitter.com/rXfODvm0tu
— ANI (@ANI) July 30, 2017