ಮಂಗಳೂರು: ನಗರದಲ್ಲಿ ಹಿಂದೂ ಯುವತಿಯನ್ನು (Hindu Girl) ಇಸ್ಲಾಂಗೆ (Islam) ಮತಾಂತರಿಸಿದ (Religious Conversion) ಆರೋಪ ಕೇಳಿ ಬಂದಿದ್ದು, ಪ್ರಸಿದ್ಧ ವೈದ್ಯೆ ಹಾಗೂ ಮುಸ್ಲಿಂ ಯುವಕನ ವಿರುದ್ಧ ದೂರು ದಾಖಲಾಗಿದೆ.
ಮಂಗಳೂರಿನ (Mangaluru) ಶಿವಾನಿ ಎಂಬ ಯುವತಿಗೆ ಕೆಲಸ ನೀಡುವ ಆಮೀಷವೊಡ್ಡಿ ಬಳಿಕ ಇಸ್ಲಾಮ್‍ಗೆ ಮತಾಂತರ ನಡೆಸಿ ಆಯೇಷಾ ಎಂದು ಹೆಸರು ಬದಲಾಯಿಸಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ನೊಂದ ಯುವತಿ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಇದನ್ನೂ ಓದಿ: ತುಂಗಾತೀರದಲ್ಲಿ ಮಾತ್ರವಲ್ಲ, ಚಾರ್ಮಾಡಿ ತಪ್ಪಲಿನಲ್ಲೂ ನಡೀತಾ ಟ್ರಯಲ್ ಬ್ಲಾಸ್ಟ್?
ಕುಲಶೇಖರದ ಮೊಬೈಲ್ ಅಂಗಡಿಯ ಖಲೀಲ್ ಹಾಗೂ ಭದ್ರಾವತಿಯ ಇಮಾಮ್ ವಿರುದ್ಧ ಆರೋಪ ಹೊರಿಸಿರುವ ಶಿವಾನಿ, ಮೊಬೈಲ್ ಅಂಗಡಿಯ ಖಲೀಲ್ ಪರಿಚಯವಾಗಿ ಆತನ ಸಂಬಂಧಿಕರ ಮನೆಯಲ್ಲಿ ಕೆಲಸವಿದೆ ಎಂದು ತಿಳಿಸಿದ್ದ ಅದರಂತೆ ನಾನು ಮಂಗಳೂರಿನ ಪ್ರಸಿದ್ಧ ಹೆರಿಗೆ ವೈದ್ಯೆ ಡಾ.ಜಮೀಲಾ ಅವರ ಮನೆಗೆ ಕೆಲಸಕ್ಕೆ ಸೇರಿಕೊಂಡಿದ್ದೆ. ಅಲ್ಲಿ ಕುರಾನ್ ಓದಲು ಹೇಳಿ ನಮಾಜ್ ಮಾಡಿಸಿ ಮತಾಂತರಕ್ಕೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ಇದನ್ನೂ ಓದಿ: ಬಾಂಬ್ ತಂದಿದ್ದು ಒಬ್ಬನ್ನಲ್ಲ, ಇಬ್ಬರು- ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲು
ಡಾ.ಜಮೀಲಾರ ಮನೆಯಲ್ಲಿ ಶಿವಾನಿ ಕೆಲಸಕ್ಕೆ ಸೇರಿದ ಬಳಿಕ ಖಲೀಲ್ ಕೂಡ ಜಮೀಲಾರ ಮನೆಗೆ ಕೆಲಸಕ್ಕೆ ಸೇರಿಸಿದ್ದು, ಅಲ್ಲಿ ಲೈಂಗಿಕ ದೌರ್ಜನ್ಯ, ಕಿರುಕುಳ ನೀಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ. ಸದ್ಯ ಶಿವಾನಿ, ವಿಶ್ವಹಿಂದೂ ಪರಿಷತ್ ಮೂಲಕ ಡಾ.ಜಮೀಲಾ, ಖಲೀಲ್ ಮತ್ತು ಇಮಾಮ್ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಐಪಿಸಿ 354, 354(ಎ), 506 ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಎಫ್‍ಐಆರ್ ದಾಖಲಾಗಿದೆ.