ಚೆನ್ನೈ: 8 ತಿಂಗಳ ಹಿಂದೆ ಮದುವೆಯಾಗಿದ್ದ ಪತ್ನಿಯ ಶೀಲ ಶಂಕಿಸಿ ಪತಿ ಕೊಲೆ ಮಾಡಿದ ಘಟನೆ ತಮಿಳುನಾಡಿದ ಮೆಟ್ಟುಕಡಾಯದಲ್ಲಿ ನಡೆದಿದೆ.
ಮುನಿಯಪ್ಪನ್(28) ಕೊಲೆ ಮಾಡಿದ ಆರೋಪಿಯಾಗಿದ್ದು, ನಿವೇದಿತಾ(19) ಕೊಲೆಯಾದ ದುರ್ದೈವಿ. ಮುನಿಯಪ್ಪನ್ ಹಾಗೂ ನಿವೇದಿತಾ 8 ತಿಂಗಳ ಹಿಂದೆ ಮದುವೆ ಆಗಿದ್ದರು. ಇಬ್ಬರು ಕರ್ನಾಟಕ ಮೂಲದವರಾಗಿದ್ದು, ಚೆನ್ನೈನ ಮೆಟ್ಟುಕಡಾಯದಲ್ಲಿ ವಾಸಿಸುತ್ತಿದ್ದರು.
Advertisement
Advertisement
ಮುನಿಯಪ್ಪನ್ ತಮ್ಮ ಪತ್ನಿ ನಿವೇದಿತಾಳ ಶೀಲ ಶಂಕಿಸಿ ಯಾವಾಗಲೂ ಆಕೆಯ ಜೊತೆ ಜಗಳವಾಡುತ್ತಿದ್ದನು. ಸೋಮವಾರ ರಾತ್ರಿ ಕೂಡ ಮುನಿಯಪ್ಪನ್, ನಿವೇದಿತಾ ಜೊತೆ ಜಗಳವಾಡಿದ್ದಾನೆ. ಈ ವೇಳೆ ಕೋಪಗೊಂಡ ಮುನಿಯಪ್ಪನ್ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
Advertisement
ನಿವೇದಿತಾಳನ್ನು ಕೊಲೆ ಮಾಡಿದ ನಂತರ ಮುನಿಯಪ್ಪನ್ ಆಕೆಯ ತಲೆ ಕಡಿದು ಅದನ್ನು ಬ್ಯಾಗ್ನಲ್ಲಿ ತುಂಬಿಕೊಂಡು ಹೋಗಿ ಕಾಲುವೆಗೆ ಎಸೆದಿದ್ದಾನೆ. ಇದನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
Advertisement
ಸದ್ಯ ಪೊಲೀಸರು ಆರೋಪಿ ಮುನಿಯಪ್ಪನ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.