ಲಕ್ನೋ: ಇತ್ತೀಚಿನ ದಿನಗಳಲ್ಲಿ ಲಿವ್-ಇನ್ ರಿಲೇಶನ್ ಶಿಪ್ ಟ್ರೆಂಡ್ ಆಗಿ ಹೋಗಿದೆ. ಮದುವೆಗೂ ಮುನ್ನ ಜೋಡಿಗಳು ಒಟ್ಟಿಗೆ ವಾಸಿಸುತ್ತಾರೆ. ಇಬ್ಬರಲ್ಲಿಯೂ ಪರಸ್ಪರ ಪ್ರೀತಿ, ಕಾಳಜಿ, ಹೊಂದಾಣಿ ಇದ್ದರೆ ತಮ್ಮ ಸಂಬಂಧವನ್ನು ಮುಂದುವರಿಸುತ್ತಾರೆ. ಇಲ್ಲವಾದರೆ ತಮ್ಮ ಸಂಗಾತಿಯನ್ನು ತೊರೆಯುತ್ತಾರೆ. ಆದರೆ ಲಿವ್ ಇನ್ ರಿಲೇಶನ್ ಶಿಪ್ನಲ್ಲಿರುವ ಎಷ್ಟೋ ಜೋಡಿಗಳು ಜಗಳವಾಡುವುದೇ ಹೆಚ್ಚು. ಅದರಲ್ಲಿಯೂ ಎಷ್ಟೋ ಜೋಡಿಗಳು ಭಿನ್ನಾಭಿಪ್ರಾಯಗಳಿಂದಲೇ ಸಂಗಾತಿಯಿಂದ ದೂರವಾಗುತ್ತಾರೆ.
Advertisement
ಇದೇ ರೀತಿ ಲಿವ್ ಇನ್ ರಿಲೇಶನ್ ಶಿಪ್ನಲ್ಲಿದ್ದ ಪ್ರಿಯಕರ ಮದುವೆಯಾಗಲು ನಿರಾಕರಿಸಿದ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಆತನ ಕತ್ತನ್ನು ರೇಜರ್ನಿಂದ ಸೀಳಿ ಬರ್ಬರವಾಗಿ ಹತ್ಯೆಗೈದು ಸೂಟ್ಕೇಸ್ನಲ್ಲಿ ಪ್ಯಾಕ್ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
Advertisement
Advertisement
ಫಿರೋಜ್ ಅಲಿಯಾಸ್ ಚ್ವಾನಿ(23) ಕೊಲೆಯಾದ ಪ್ರಿಯಕರ. ಆರೋಪಿಯನ್ನು ಪ್ರೀತಿ ಶರ್ಮಾ ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಪತಿಯಿಂದ ದೂರವಾದ ಪ್ರೀತಿ ಶರ್ಮಾ, ಫಿರೋಜ್ ಅಲಿಯಾಸ್ ಚ್ವಾನಿ ಜೊತೆ ವಾಸಿಸುತ್ತಿದ್ದಳು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 50:50 ಅಧಿಕಾರ – 18 ಶಾಸಕರು ಸಚಿವರಾಗಿ ಪ್ರಮಾಣ ವಚನ
Advertisement
ದಿನನಿತ್ಯದಂತೆ ಭಾನುವಾರ ತಡರಾತ್ರಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮಹಿಳೆಯೊಬ್ಬರು ಕಪ್ಪು ಟ್ರಾಲಿ ಬ್ಯಾಗ್ ಹಿಡಿದುಕೊಂಡು ನಡೆದು ಬರುತ್ತಿರುವುದನ್ನು ಟೀಲಾ ಮಾಡ್ ಪೊಲೀಸರು ನೋಡಿದ್ದಾರೆ. ನಂತರ ಮಹಿಳಾ ಪೇದೆಯೊಬ್ಬರು ಪರಿಶೀಲನೆ ನಡೆಸಿದಾಗ ಸೂಟ್ಗೇಸ್ನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತನ್ನ ಜೊತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಪ್ರಿಯಕರನ ಶವ ಎಂದು ಸತ್ಯ ಬಾಯ್ಬಿಟ್ಟಿದ್ದಾಳೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ಮುನಿರಾಜ್ ಜಿ ಹೇಳಿದ್ದಾರೆ. ಇದನ್ನೂ ಓದಿ: ಬಡ ಹುಡುಗಿಯರ ಶಿಕ್ಷಣಕ್ಕೆ ಲಡಾಖ್ನ ವರ್ಜಿನ್ ಶಿಖರ ಏರುತ್ತಿರುವ ಗಟ್ಟಿಗಿತ್ತಿಯರು
ಫಿರೋಜ್ನನ್ನು ಮದುವೆಯಾಗುವಂತೆ ಪ್ರೀತಿ ಶರ್ಮಾ ಕೇಳಿದ್ದಾಳೆ. ಆದರೆ ಅಂತರ್ಜಾತಿ ವಿವಾಹವನ್ನು ತನ್ನ ಪೋಷಕರು ಒಪ್ಪುವುದಿಲ್ಲ ಎಂದು ಫಿರೋಜ್ ನೆಪ ಹೇಳಿ ಮದುವೆಯಾಗಲು ನಿರಾಕರಿಸಿದ್ದಾನೆ. ಆದರೂ ತನ್ನನ್ನು ಮದುವೆಯಾಗುವಂತೆ ಮಹಿಳೆ ಫಿರೋಜ್ಗೆ ಒತ್ತಡ ಹೇರಿದಾಗ, ನೀನು ನಡತೆ ಗೆಟ್ಟವಳು ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಫಿರೋಜ್ ಕತ್ತನ್ನು ರೇಜರ್ನಿಂದ ಸೀಳಿ ಹತ್ಯೆಗೈದಿದ್ದಾಳೆ. ನಂತರ ಪ್ರೀತಿ ಶರ್ಮಾ ಟ್ರಾಲಿ ಬ್ಯಾಗ್ ಖರೀದಿಸಿ ಅದರೊಳಗೆ ಶವವನ್ನು ತುಂಬಿಕೊಂಡು ಭಾನುವಾರ ಗಾಜಿಯಾಬಾದ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಹಳಿಯ ಮೇಲೆ ಎಸೆಯಲು ಹೋಗುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.