ಜೋಧಪುರ: ಇತ್ತೀಚೆಗೆ ದೇಶದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ. ರಾತ್ರಿ ತಮ್ಮ ಮನೆಯ ಮುಂದುಗಡೆ ಮಲಗಿದ್ದ ಮಹಿಳೆಯೊಬ್ಬರ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಘಟನೆ ರಾಜಸ್ಥಾನದ ವಾರದತ್ ಪಟ್ಟಣದ ಪ್ರತಾಪನಗರದಲ್ಲಿ ನಡೆದಿದೆ.
ಮಹಿಳೆಯೊಬ್ಬರು ರಾತ್ರಿ ಮನೆಯ ಮುಂದೆ ಮಲಗಿದ್ದರು. ತಡರಾತ್ರಿ ಬಂದ ಕಾಮುಕರು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ಸಂಬಂಧ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಡರಾತ್ರಿ ಮನೆಯ ಹತ್ತಿರ ಬಂದ ದುಷ್ಕರ್ಮಿಗಳು ನನ್ನ ಮೇಲೆ ಬಲತ್ಕಾರ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಎಲ್ಲ ದೃಶ್ಯಗಳು ನೆರೆ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: ಹಾಡಹಗಲೇ ಫುಟ್ ಪಾತ್‍ನಲ್ಲೇ ರೇಪ್- ಸಹಾಯಕ್ಕೆ ಯಾರು ಬರಲಿಲ್ಲ ಆದ್ರೆ ವಿಡಿಯೋ ಮಾಡಿದ್ರು
ರಾತ್ರಿ ಸುಮಾರು 1.30ಕ್ಕೆ ಬೈಕಿನಲ್ಲಿ ಬಂದ ಮೂವರು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈಗಾಗಲೇ ಸಂತ್ರಸ್ತ ಮಹಿಳೆ ಮೂವರು ಆರೋಪಿಗಳ ಹೆಸರನ್ನು ತಿಳಿಸಿದ್ದು, ನೆರೆಮನೆಯ ಸಿಸಿಟಿವಿಯಲ್ಲಿ ವಿಡಿಯೋ ಆಧರಿಸಿ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನೂ ಓದಿ: ಸೇತುವೆ ಕೆಳಗೆ ಎಳೆದುಕೊಂಡು ಹೋಗಿ, ಯುವತಿಯ ಕೈಕಾಲು ಕಟ್ಟಿ ನಾಲ್ವರಿಂದ ಗ್ಯಾಂಗ್ ರೇಪ್
#Rajasthan: Woman allegedly gang-raped in #Jodhpur, files complaint with police. Investigation underway says police. pic.twitter.com/U7lywdwmXr
— ANI (@ANI) November 8, 2017