– ಇದೀಗ ಮಹಿಳೆಯ 6 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
ಹುಬ್ಬಳ್ಳಿ: ಗಂಡ-ಹೆಂಡತಿ ಜಗಳ ಬಗೆಹರಿಸುವ ನೆಪದಲ್ಲಿ ವಿವಾಹಿತ ಮಹಿಳೆಯನ್ನ ಬಲೆ ಹಾಕಿಕೊಂಡ ಪೊಲೀಸ್ ಕಾನ್ಸಟೇಬಲ್ (Police Constable), ಬಳಿಕ ಆಕೆ ಜೊತೆಗೆ ಅಕ್ರಮ ಸಂಬಂಧವಿಟ್ಟುಕೊಂಡಿರುವ ಜೊತೆಗೆ ಮಹಿಳೆಯ 6 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿಯ (Hubballi) ಪೋಲಿ ಪೋಲಿಸಪ್ಪ ಮಾಡಿರುವ ಕೆಲಸಕ್ಕೆ ಪೊಲೀಸ್ ಇಲಾಖೆಗೆ ತಲೆನೋವಾಗಿದೆ. ಪೊಲೀಸ್ ಕಾನ್ಸ್‌ಟೇಬಲ್ ಕಾಮದಾಸೆಗೆ ಸುಂದರ ಕುಟುಂಬ (Beautiful Family) ಹೊಡೆದು ಬೀದಿಗೆ ಬಂದಿದೆ. ಇದನ್ನೂ ಓದಿ: ರಾಜ್ಯಾಧ್ಯಕ್ಷನಾಗಿ ನಾನೇ ಮುಂದುವರಿಯುವ ವಿಶ್ವಾಸವಿದೆ: ವಿಜಯೇಂದ್ರ
ಹುಬ್ಬಳ್ಳಿಯ ಘಂಟಿಕೇರಿ ಠಾಣೆಯ ಕಾನ್ಸ್‌ಟೇಬಲ್ ಹಜರತ್ ಮಿಟ್ಟೆಖಾನ್ ವಿರುದ್ಧ ಹುಬ್ಬಳ್ಳಿ ನಗರದ ಬೆಂಡಿಗೇರಿ ಠಾಣೆಯಲ್ಲಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಪೊಲೀಸ್ ಸಹಾಯವಾಣಿ 112 ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್‌ಟೇಬಲ್ ಹಜರತ್, ಗಂಡ-ಹೆಂಡತಿ ಜಗಳದ ಕರೆ ಆಧರಿಸಿ, ವಿವಾಹಿತಳ ಮನೆಗೆ ಹೋಗಿದ್ದ. ಜಗಳ ಬಗೆಹರಿಸುವ ನೆಪದಲ್ಲಿ ಮಹಿಳೆ ಜೊತೆಗೆ ಸ್ನೇಹ ಮಾಡಿ, ಆಕೆಯ ಜೊತೆಗೆ ಅಕ್ರಮ ಸಂಬಂಧ ಕೂಡ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದನ್ನೂ ಓದಿ: ಭಾಷೆ ಹೆಸರಲ್ಲಿ ಜನರನ್ನು ವಿಭಜಿಸಬಾರದು: ಮರಾಠಿ-ಹಿಂದಿ ಸಂಘರ್ಷ ಬಗ್ಗೆ ಕಂಗನಾ ಪ್ರತಿಕ್ರಿಯೆ
ಇದರ ಜೊತೆಗೆ ಮಹಿಳೆಯ 6 ವರ್ಷದ ಬಾಲಕಿಗೆ ಸಹ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಇದರಿಂದ ನೊಂದ ಮಹಿಳೆ ಗಂಡ ಹಾಗೂ ಸಂತ್ರಸ್ತೆ ಬಾಲಕಿ ತಂದೆ, ಕಾನ್ಸ್‌ಟೇಬಲ್ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಹೋರಾಟಕ್ಕಿಳಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಆರಂಭಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಶಾಸಕರ ವಿಶ್ವಾಸ ಕಳ್ಕೊಂಡಿದ್ದಾರೆ, ಗೇಟ್ ಪಾಸ್ ನೀಡೋದು ಪಕ್ಕಾ: ಆರ್. ಅಶೋಕ್ ಭವಿಷ್ಯ