ಅಟ್ಲಾಂಟ: ಮಹಿಳೆಯೊಬ್ಬಳು ತನ್ನ 100,000 ಡಾಲರ್(ಅಂದಾಜು 65 ಲಕ್ಷ ರೂ.) ಮೌಲ್ಯದ ವಜ್ರದ ಆಭರಣಗಳನ್ನ ಕಸದ ರಾಶಿಗೆ ಎಸೆದಿರುವ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.
ಮಹಿಳೆ ತನ್ನ ವಜ್ರದ ಆಭರಣಗಳನ್ನ ಆಕಸ್ಮಿಕವಾಗಿ ಕಸದ ರಾಶಿಗೆ ಎಸೆದಿದ್ದರು. ನಂತರ ಕಸ ವಿಲೇವಾರಿ ಮಾಡುವವರಿಗೆ ಕರೆ ಮಾಡಿ ತಾನು ಕಳೆದುಕೊಂಡ ಭಾರೀ ಮೊತ್ತದ ಆಭರಣದ ಬಗ್ಗೆ ತಿಳಿಸಿದ್ದರು.
Advertisement
ಮಹಿಳೆಯ ಆಭರಣಗಳನ್ನ ಕಳೆದುಕೊಂಡ ಬಗ್ಗೆ ಮಾಹಿತಿ ತಿಳಿದ ನಂತರ ಹಾಲ್ ಕೌಂಟಿಯ ಘನ ತಾಜ್ಯ ವಿಭಾಗದ ನಿರ್ದೇಶಕರಾದ ಜಾನ್ನಿ ವಿಕ್ಕರ್ಸ್ ಅವರು ತಮ್ಮ ಕಾರ್ಮಿಕರೊಂದಿಗೆ ಆಭರಣ ಹುಡುಕುವ ಕಾರ್ಯಾಚರಣೆಯನ್ನ ಶುರುಮಾಡಿದ್ದರು. ಆದರೆ ಆ ಮಹಿಳೆಯು ಕರೆ ಮಾಡಿದಾಗ ಒಂದು ಸುಳಿವನ್ನ ಮಾತ್ರ ಕೊಟ್ಟಿದ್ದರು. ಮಹಿಳೆಯು ತನ್ನ ಆಭರಣವನ್ನ ಕಪ್ಪು ಬ್ಯಾಗ್‍ನಲ್ಲಿ ಇಟ್ಟಿದ್ದು, ಆ ಕಪ್ಪು ಬ್ಯಾಗ್‍ನ ಹುಡುಕಾಟ ಪ್ರಾರಂಭವಾಯಿತು.
Advertisement
Advertisement
ಪ್ರತಿ ದಿನ 300 ಟನ್‍ಗಳ ಕಸದ ರಾಶಿ ಬೀಳುತ್ತಿದ್ದ ಸ್ಥಳದಲ್ಲಿ, ಮೂರು ಗಂಟೆಗಳ ನಿರಂತರ ಪ್ರಯತ್ನದಿಂದ, ಪ್ರತಿ 20 ನಿಮಿಷಕ್ಕೆ 9-10 ಟನ್‍ಗಳ ಕಸದ ರಾಶಿಯನ್ನ ಹುಡುಕಿ ಕೊನೆಗೂ ಆ ಕಪ್ಪು ಬ್ಯಾಗನ್ನು ಕಾರ್ಮಿಕರು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಕಸದ ರಾಶಿಯಲ್ಲಿ ಆ ಕಪ್ಪು ಬ್ಯಾಗ್ ಸಿಕ್ಕ ಬಳಿಕ ಅಲ್ಲಿಯ ಕಾರ್ಮಿಕರು ತಮ್ಮದೇ ವಸ್ತು ಕಳೆದು ಹೋದಾಗ ಮತ್ತೆ ಹುಡುಕಿದಷ್ಟು ಸಂತಸವನ್ನ ವ್ಯಕ್ತಪಡಿಸಿದರು.
ಆ ಕಪ್ಪು ಬ್ಯಾಗ್‍ನಲ್ಲಿ 100,000 ಡಾಲರ್(ಅಂದಾಜು 65 ಲಕ್ಷ ರೂ.) ಬೆಲೆ ಬಾಳುವ ಎರಡು ಉಂಗುರಗಳು ಮತ್ತು ಒಂದು ಕೈಬಳೆ ಇದ್ದವು. ವಜ್ರದ ಆಭರಣವನ್ನ ಹುಡುಕಿದ ಕಾರ್ಮಿಕರಿಗೆ ಆ ಮಹಿಳೆ ಅಭಿನಂದನೆ ಸಲ್ಲಿಸಿದರು.